ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾಗೆ ಪ್ರಯಾಸದ ಜಯ!

By Staff
|
Google Oneindia Kannada News

ಬ್ರಿಸ್ಟಲ್ , ಆಗಸ್ಟ್ 25 : ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡ, ಇಂಗ್ಲೆಂಡ್ ವಿರುದ್ಧ 9ರನ್ ಗಳ ಪ್ರಯಾಸದ ಗೆಲುವು ಸಾಧಿಸಿ, ಏಳು ಪಂದ್ಯಗಳ ಸರಣಿಯನ್ನು 1,1ರ ಅಂತರದಿಂದ ಸಮನಾಗಿಸಿಕೊಂಡಿದೆ.

ಗೆಲ್ಲಲು ಬೇಕಾಗಿದ್ದ 330ರನ್ ಗಳನ್ನು ಇಂಗ್ಲೆಂಡ್ ತಂಡ ಗಳಿಸಲು ಆಗಲಿಲ್ಲ. ನಿಗದಿತ 50ಓವರ್ ಗಳಲ್ಲಿ 320ರನ್ ಗಳಿಸಿ, 8 ವಿಕೆಟ್ ಕಳೆದುಕೊಂಡು ಇಂಗ್ಲೆಂಡ್ ಸೋಲೊಪ್ಪಿಕೊಂಡಿತು.

ಭಾರತದ ಪರ ಲೆಗ್ ಸ್ಪಿನ್ನರ್ ಪಿಯೂಷ್ ಚಾವ್ಲಾ ಹಾಗೂ ಮುನಾಫ್ ಪಟೇಲ್ ತಲಾ 3 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು.

ಈ ಮುಂಚೆ ಶತಕ ವಂಚಿತ ಸಚಿನ್ ತೆಂಡೂಲ್ಕರ್ ರವರ ಆಕರ್ಷಕ 99 ರನ್ ಹಾಗೂ ದ್ರಾವಿಡ್ ಹೊಡೆದ 92 ರನ್ ಗಳ ನೆರವಿನಿಂದ ಬೃಹತ್ ಮೊತ್ತವನ್ನು ಭಾರತ ದಾಖಲಿಸಿತ್ತು. ಇಂಗ್ಲೆಂಡ್ ಪರ ಫ್ಲಿಂಟಾಫ್ 56ರನ್ನಿತ್ತು 5 ವಿಕೆಟ್ ಗಳಿಸಿ ಯಶಸ್ವಿ ಬೌಲರ್ ಎನಿಸಿದರು.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X