ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರ್ ಕಾರ್ ಕಾರ್ ಎಲ್ನೋಡಿ ಕಾರ್!ಹೊಸ ವೆಬ್ ಸೈಟ್!

By Staff
|
Google Oneindia Kannada News

ಬೆಂಗಳೂರು, ಆಗಸ್ಟ್ 21 : ಕಾರು ಖರೀದಿದಾರರಿಗೆ ನೆರವಾಗಲು ದೇಶದಲ್ಲೇ ಮೊದಲ ಬಾರಿಗೆ ಕಾರುಗಳಿಗೆ ಸಂಬಂಧಿಸಿದ ಪೋರ್ಟಲ್ carazoo.comಮಂಗಳವಾರ ಆರಂಭಗೊಂಡಿದೆ.

ಲಾಜಿಕ್ಸ್ ಮೈಕ್ರೋ ಸಿಸ್ಟಮ್ ಲಿಮಿಟೆಡ್ ಆರಂಭಿಸಿರುವ ಈ ಪೋರ್ಟಲ್ ಆರಂಭಿಸಿದೆ. ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಕಂಪನಿಯ ಕಾರ್ಯ ನಿರ್ವಾಹಕ ನಿರ್ದೇಶಕ ಸಂಜಯ್ ಸೋನಿ, ಅಮೆರಿಕಾ ಮೂಲದ ಕಂಪನಿಯೊಂದು ಅಮೆರಿಕಾದಲ್ಲಿ ಇಂಥದ್ದೇ ಸೇವೆ ಆರಂಭಿಸಿದೆ.

ನಮ್ಮ ಈ ಪೋರ್ಟಲ್ ನಿಂದ ಗ್ರಾಹಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.

ಸುಮಾರು 78 ಮಾದರಿಯ ಕಾರುಗಳನ್ನು ನಮ್ಮಲ್ಲಿ ಆಯ್ಕೆ ಮಾಡಬಹುದು. ಸೆಕೆಂಡ್ ಹ್ಯಾಂಡ್ ಕಾರಿನ ಬಗ್ಗೆಯೂ ನಮ್ಮಲ್ಲಿ ಮಾಹಿತಿ ಉಂಟು. ಕಾರು ಮಾರಾಟಗಾರರಿಗೆ, ಗ್ರಾಹಕರಿಗೆ, ಕಾರಿಗೆ ಖರೀದಿಗೆ ಹಣಕಾಸು ನೆರವು ನೀಡುವವರಿಗೆ, ವಿಮೆ ಕಂಪನಿಗಳ ಮಧ್ಯೆ ನಾವು ಸೇತುವೆಯಂತೆ ಕೆಲಸ ಮಾಡುತ್ತೇವೆ ಎಂದು ವಿವರಿಸಿದರು.

ಕಂಪನಿ ಉಪಾಧ್ಯಕ್ಷ ಪಂಕಜ್ ಪಟೇಲ್ ಈ ಸಂದರ್ಭದಲ್ಲಿ ಹಾಜರಿದ್ದರು.

(ಯುಎನ್ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X