• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಳ್ಳ ಪೊಲೀಸ್ : ಕದ್ದ ಮಾಲು ಮಗನಿಗೆ ಕಾಣಿಕೆ

By Staff
|


ಬೇಲಿಯೇ ಎದ್ದು ಹೊಲವನ್ನು ಮೇಯ್ದ ಇನ್ನೊಂದು ಉದಾಹರಣೆ ಇಲ್ಲಿದೆ ನೋಡಿ.

ಕಳ್ಳತನಕ್ಕೊಳಗಾಗಿ ಪೊಲೀಸರ ಕೈಸೇರಿದ್ದ ಬೈಕನ್ನು ಪೊಲೀಸನೊಬ್ಬ ಮಗನಿಗೆ ಕಾಣಿಕೆಯಾಗಿ ನೀಡಿದ ಪ್ರಕರಣ ಹೈದರಾಬಾದ್‌ನಲ್ಲಿ ಹುಯಿಲೆಬ್ಬಿಸಿದೆ. ಸೈಬರಾಬಾದ್ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.

ಕಾಣಿಕೆಯಾಗಿ ಪಡೆದ ಬೈಕ್‌ಗೆ ಸಂಬಂಧಿಸಿದ ದಾಖಲೆಗಳನ್ನು ನೀಡಲು ಮಗರಾಯ ವಿಫಲವಾಗಿರುವುದು ಗೊತ್ತಿದ್ದರೂ ಪೊಲೀಸರು ಸುಮ್ಮನೆ ಕೂತಿದ್ದರು, ಈ ಪ್ರಕರಣ ಪತ್ರಿಕೆಯೊಂದರ ಮುಖಾಂತರ ಬೆಳಕಿಗೆ ಬರುವವರೆಗೂ! ಈಗ ಎಚ್ಚೆತ್ತು ತನಿಖೆಗೆ ಮುಂದಾಗಿದ್ದಾರೆ.

ಆದರೂ ತನಿಖೆ ಗುಜರಿ ಸೇರುವುದಿಲ್ಲವೆಂಬ ಗ್ಯಾರಂಟಿ ಏನು?

***

ರು.ಮೌಲ್ಯವರ್ಧನೆ : ಎಸ್‌ಟಿಪಿಐ ವಿಸ್ತರಣೆಗೆ ನಾಸ್ಕಾಂ ಆಗ್ರಹ

ರುಪಾಯಿ ಮೌಲ್ಯವರ್ಧನೆಯಿಂದಾಗಿ ಐಟಿ ಕಂಪನಿಗಳ ಮೇಲಾಗುತ್ತಿರುವ ಪರಿಣಾಮವನ್ನು ತಗ್ಗಿಸಲು ಎಸ್‌ಟಿಪಿಐ ಯೋಜನೆಯನ್ನು 2009ಕ್ಕೂ ಮುಂದೆ ವಿಸ್ತರಿಸುವಂತೆ ನಾಸ್ಕಾಂ ಕೇಂದ್ರವನ್ನು ಆಗ್ರಹಿಸಿದೆ.

ಎಸ್‌ಟಿಪಿಐ(ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ) ಯೋಜನೆಯಡಿ ಐಟಿ ಮತ್ತು ಐಟಿ ಆಧಾರಿತ ಸೇವೆಗಳಿಗೆ 2009ರವರೆಗೆ ಪ್ರೋತ್ಸಾಹದಾಯಕ ತೆರಿಗೆ ರಿಯಾಯಿತಿ ನೀಡುತ್ತಿದೆ.

ರುಪಾಯಿ ಮೌಲ್ಯವರ್ಧನೆಯ ಹೊಡೆತದಿಂದ ಚೇತರಿಸಿಕೊಳ್ಳಲು ಎಸ್‌ಟಿಪಿಐ ವಿಸ್ತರಣೆ ಬಹುಮುಖ್ಯ ಮತ್ತು ಅನಿವಾರ್ಯ ಎಂದು ನಾಸ್ಕಾಂ ಅಧ್ಯಕ್ಷ ಕಿರಣ್ ಕಾರ್ನಿಕ್ ಅಭಿಪ್ರಾಯಪಟ್ಟಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more