ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ಪೈಲಟ್ ಗಳಿಂದ 80ದಿನಗಳಲ್ಲಿ ವಿಶ್ವ ಪ್ರದಕ್ಷಿಣೆ

By Staff
|
Google Oneindia Kannada News

ನವದೆಹಲಿ, ಆಗಸ್ಟ್ 20 : ಭಾರತೀಯ ವಾಯುಪಡೆಯ ಇಬ್ಬರು ಪೈಲಟ್ ಗಳು ವಿಶ್ವವನ್ನು ಕೇವಲ 80ದಿನಗಳಲ್ಲಿ ಸುತ್ತಿ, ನೂತನ ವಿಶ್ವದಾಖಲೆ ನಿರ್ಮಿಸಿದ್ದಾರೆ.

ವಿಂಗ್ ಕಮಾಂಡರ್ ರಾಹುಲ್ ಮೊಂಗಾ ಹಾಗೂ ಅನಿಲ್ ಕುಮಾರ್ ತಮ್ಮ ವಿಶ್ವಯಾತ್ರೆಯನ್ನು ಯಶಸ್ವಿಯಾಗಿ ಪೂರೈಸಿ, ಗುಜರಾತ್ ನ ಭುಜ್ ನಲ್ಲಿ ಬಂದಿಳಿದಿದ್ದಾರೆ.

ಬರ್ಮಾ, ಥೈಲ್ಯಾಂಡ್, ವಿಯಟ್ನಾಂ, ಚೈನಾ, ರಷ್ಯಾ, ಅಮೆರಿಕ, ಕೆನಡಾ, ಗ್ರೀನ್ ಲ್ಯಾಂಡ್, ಐಸ್ ಲ್ಯಾಂಡ್, ಇಂಗ್ಲೆಂಡ್, ಜರ್ಮನಿ, ಇಟಲಿ, ಗ್ರೀಸ್, ಟರ್ಕಿ, ಇರಾನ್ ಹಾಗೂ ಪಾಕಿಸ್ತಾನ ಸೇರಿದಂತೆ ಪ್ರಮುಖ ದೇಶಗಳನ್ನು ಕ್ರಮಿಸಿದ್ದಾರೆ. ಪಾಕಿಸ್ತಾನದ ಆಗಸದಲ್ಲಿ ಹಾರಾಡಲು ಅನುಮತಿ ಪಡೆದದ್ದು ಮತ್ತು ಕರಾಚಿ ನಿಲ್ದಾಣದಲ್ಲಿ ಇಂಧನ ತುಂಬಿಸಿಕೊಂಡಿದ್ದು ಯಾತ್ರೆಯ ಇನ್ನೊಂದು ವಿಶೇಷ.

ಸುಮಾರು 40,497 ಕಿ.ಮೀ ಕ್ರಮಿಸಿರುವ ಇವರು, ಸುಮಾರು 16 ದೇಶಗಳಲ್ಲಿನ 81 ನಿಲ್ದಾಣಗಳನ್ನು ನೋಡಿಬಂದಿದ್ದಾರೆ. ಈ ಹಿಂದೆ ಬ್ರಿಟನ್ ದೇಶದ ಕೊಲಿನ್ ಬೊಡಿಲ್ 99 ದಿನಗಳಲ್ಲಿ ಈ ರೀತಿಯ ಸಾಧನೆಯನ್ನು ಮಾಡಿದ್ದರು.

ವಿಶ್ವಪರ್ಯಟನೆ ಸಾಧನೆಯ ಜೊತೆಗೆ ವೇಗದಲ್ಲಿ ಚಲನೆಯಲ್ಲೂ ಭಾರತೀಯರು ದಾಖಲೆ ಮೆರೆದಿದ್ದಾರೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X