• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಉಡುಪಿ ಅಷ್ಟಮಠದ ಸೋದೆ ವಾದಿರಾಜ ಮಠಾಧೀಶ ಇನ್ನಿಲ್ಲ

By Staff
|

ಶಿರಸಿ, ಆಗಸ್ಟ್ 19: ಉಡುಪಿಯ ಅಷ್ಟಮಠಕ್ಕೆ ಸೇರಿದ ಸೋದೆ ವಾದಿರಾಜ ಮಠದ ಶ್ರೀ ವಿಶ್ವೋತ್ತಮ ತೀರ್ಥ ಸ್ವಾಮೀಜಿ ನಿಧನರಾಗಿದ್ದಾರೆ.

ಶನಿವಾರ(ಅ.18)ದಂದು ಮಧ್ಯಾಹ್ನ ಉತ್ತರಕನ್ನಡ ಜಿಲ್ಲೆ ಶಿರಸಿ ಬಳಿಯ ಸೋದೆ(ಸೋಂದಾ) ಕ್ಷೇತ್ರದ ಮಠದಲ್ಲಿ ಸ್ವಾಮೀಜಿ ಹೃದಯಾಘಾತದಿಂದ ವಿಧಿವಶರಾದರು ಎಂದುಮಠದವರು ಹೇಳಿದ್ದಾರೆ.ಅವರಿಗೆ 73 ವರ್ಷ ವಯಸ್ಸಾಗಿತ್ತು.

ಚಾತುರ್ಮಾಸ ವ್ರತಸ್ಥರಾಗಿದ್ದ ಸ್ವಾಮೀಜಿ ಶನಿವಾರ ಮಧ್ಯಾಹ್ನ 1:30ರವರೆಗೂ ಭಕ್ತರಿಂದ ಭಿಕ್ಷೆ ಸ್ವೀಕರಿಸಿ, ಸುಮಾರು 300 ಭಕ್ತರಿಗೆ ಮಂತ್ರಾಕ್ಷತೆ ನೀಡಿ ಹರಸಿದ್ದರು. ನಂತರ ಕೆಲ ಸಮಯದಲ್ಲೇ ಆವರು ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ.

ಉಡುಪಿ ರಥಬೀದಿ ಬಂದ್:

ಸೋದೆ ಮಠದ ಮಠಾಧೀಶರ ಮೃತವಾರ್ತೆ ತಿಳಿಯುತ್ತಿದ್ದಂತೆ ಉಡುಪಿಯ ರಥಬೀದಿಯಲ್ಲಿ ಅಘೋಷಿತ ಬಂದ್ ಆಚರಿಸಿ ಶೋಕ ವ್ಯಕ್ತಪಡಿಸಲಾಯಿತು.ರಾಜ್ಯದ ಹಲವೆಡೆಯಿಂದ ಹಾಗೂ ಹೊರರಾಜ್ಯಗಳಿಂದ ಭಕ್ತರು ಆಗಮಿಸಿ ಶ್ರೀಗಳ ಅಂತಿಮ ದರ್ಶನ ಪಡೆದರು.

ಉಡುಪಿ ಉಸ್ತುವಾರಿ ಸಚಿವ ವಿ.ಎಸ್. ಆಚಾರ್ಯ ಹಾಗೂ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ವಿಶ್ವೇಶ್ವರ ಹೆಗಡೆ ಕಾಗೇರಿ ವಾದಿರಾಜ ಮಠಕ್ಕೆ ತೆರಳಿ ಶ್ರೀಗಳ ಅಂತಿಮ ದರ್ಶನ ಪಡೆದರು.

ಸ್ವಾಮೀಜಿ ಕುರಿತು:

1943ರ ಗಣೇಶ ಚತುರ್ಥಿಯಂದು ತಮ್ಮ 9 ನೇವಯಸ್ಸಿನಲ್ಲಿ ಸನ್ಯಾಸಶ್ರಮ ಸ್ವೀಕರಿಸಿ, 4 ಬಾರಿ ಶ್ರೀ ಕೃಷ್ಣ ಮಠದ ಪರ್ಯಾಯ ಪೀಠವನ್ನು ನಡೆಸಿದ್ದರು. ಸೋದೆ ಮಠದ ವಾದಿರಾಜ ಸ್ವಾಮಿ ಪರಂಪರೆಯ 35 ನೇ ಸ್ವಾಮೀಜಿಗಳಾಗಿದ್ದರು.

ಅಂತ್ಯ ಸಂಸ್ಕಾರ:

ಶ್ರೀವಿಶ್ವೋತ್ತಮ ತೀರ್ಥರ ಅಂತ್ಯ ಸಂಸ್ಕಾರವನ್ನು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಶನಿವಾರ ಮಧ್ಯರಾತ್ರಿ ನೆರವೇರಿಸಲಾಯಿತು. ಶಿರೂರು ಮಠದ ಲಕ್ಷ್ಮೀ ವರತೀರ್ಥರು ಮತ್ತು ವಿಶ್ವವಲ್ಲಭ ತೀರ್ಥರು ಅಂತ್ಯ ಸಂಸ್ಕಾರ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ಶ್ರೀವಿಶ್ವೋತ್ತಮ ತೀರ್ಥರ ಸಂಕಲ್ಪದಂತೆ ಉಡುಪಿ ಸೋದೆ ಮಠದ ಮುಂದಿನ ಅಧಿಕಾರವನ್ನು ಶ್ರೀ ವಿಶ್ವವಲ್ಲಭ ತೀರ್ಥರು ವಹಿಸಿಕೊಳ್ಳುವ ಸಾಧ್ಯತೆಯಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more