• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಏಳು ಜನ ಐಎಎಸ್ ಅಧಿಕಾರಿಗಳ ಹಠಾತ್ ವರ್ಗಾವಣೆ

By Staff
|

ಸಾರಿಗೆ ಆಯುಕ್ತ ಎಂ.ಸಿ.ನಾರಾಯಣಗೌಡ ಅವರನ್ನು ವರ್ಗಾವಣೆ ಮಾಡಲಾಗಿದ್ದು ಆವರ ಜಾಗಕ್ಕೆ ಲಕ್ಷ್ಮೀನಾರಾಯಣ ಅವರನ್ನು ನೇಮಕ ಮಾಡಲಾಗಿದೆ.

ಆರ್ ಟಿ ಓ ಗಳ ವರ್ಗಾವಣೆ ಕುರಿತಂತೆ ಸಾರಿಗೆ ಸಚಿವ ಚೆಲುವರಾಯ ಸ್ವಾಮಿ ಹಾಗೂ ನಾರಾಯಣ ಗೌಡ ಅವರ ನಡುವೆ ನಡೆದ ಜಟಾಪಟಿ ಈಗ ವರ್ಗಾವಣೆಯ ಸರಮಾಲೆಯನ್ನು ಹುಟ್ಟುಹಾಕಿದೆ.

ಏಳು ಪ್ರಮುಖ ಐಎಎಸ್ ಅಧಿಕಾರ ವರ್ಗಾವಣೆಯಾಗಿದೆ.

* ಎಂ. ಮದನಗೋಪಾಲ್( ಯೋಜನಾ ನಿರ್ದೇಶಕರು ,ಕರ್ನಾಟಕ ಆರೋಗ್ಯ ಪದ್ಧತಿಗಳ ಅಭಿವೃದ್ಧಿ ಯೋಜನೆ ಹಾಗೂ ಗ್ರಾಮೀಣ ಆರೋಗ್ಯ ಮಿಷನ್ ನಿರ್ದೇಶಕ)

* ವಂದಿತಾ ಶರ್ಮ( ಯೋಜನಾ ನಿರ್ದೇಶಕರು , ಸರ್ವ ಶಿಕ್ಷಣ ಅಭಿಯಾನ, ಬೆಂಗಳೂರು)

* ರಾಜೀವ್ ಚಾವ್ಲಾ (ಪ್ರಾದೇಶಿಕ ಆಯುಕ್ತರು, ಗುಲ್ಭರ್ಗಾ)

* ಅನಿಲ್ ಕುಮಾರ್ ಝಾ (ಕಾರ್ಯದರ್ಶಿ, ಆರ್ಥಿಕ ಇಲಾಖೆ ,ಬೆಂಗಳೂರು)

* ಕೆ.ಎಸ್. ಪ್ರಭಾಕರ್( ಕಾರ್ಯದರ್ಶಿ, ವೈದ್ಯಕೀಯ ಶಿಕ್ಷಣ, ಬೆಂಗಳೂರು)

* ಕೆ. ಅಮರ ನಾರಾಯಣ( ಹೆಚ್ಚುವರಿ ಕಾರ್ಯದರ್ಶಿ, ರಾಜ್ಯ ಮಾನವ ಹಕ್ಕುಗಳ ಆಯೋಗ, ಬೆಂಗಳೂರು)

* ರೇಜು( ಉಪ ವಿಭಾಗಾಧಿಕಾರಿ, ತರೀಕೆರೆ ಉಪ ವಿಭಾಗ, ಚಿಕ್ಕಮಗಳೂರು ಜಿಲ್ಲೆ)

* * * *

ಎನ್ ಕೌಂಟರ್ ನಲ್ಲಿ ನಕ್ಸಲ್ ರಂಗಾರೆಡ್ಡಿ ಹತ್ಯೆ

ಕರ್ನಾಟಕ ಹಾಗೂ ಆಂಧ್ರಪ್ರದೇಶಗಳಲ್ಲಿ ದಶಕದಹಿಂದಿನಿಂದ ನಕ್ಸಲ್ ಚಟುವಟಿಕೆ ನಿರಂತರವಾಗಿ ಭಾಗಿಯಾಗಿದ್ದ ರಂಗಾರೆಡ್ಡಿ ಅಲಿಯಾಸ್ ಕಮ್ಮಾ ಗೋಪಾಲ್ , ಚೆಲ್ಲ ಗೋಪಾಲ್ ,ಅಜ್ಯ ಅಲಿಯಾಸ್ ಮೋಹನ್ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ.

ಬಳ್ಳಾರಿನಿಂದ ಸುಮಾರು 50 ಕಿ.ಮೀ ದೂರದ ಉರವಕೊಂಡ ಅರಣ್ಯ ಪ್ರದೇಶದಲ್ಲಿ ಶನಿವಾರ ಬೆಳಗಿನ ಜಾವ ಪೊಲೀಸ್ ಗುಂಡಿಗೆ ಸಿಕ್ಕಿ ಸಾವನ್ನಪ್ಪಿದ್ದಾನೆ.

ಆಂಧ್ರದ ಮಾಜಿ ಸಚಿವ ಪೆರಟಾಲ ರವಿಯವರ ಕಟ್ಟಾ ಬೆಂಬಲಿಗನಾಗಿದ್ದ ರಂಗಾರೆಡ್ಡಿ, ರವಿಯವರನ್ನು ಕೊಂದವರನ್ನು ಮುಗಿಸಲು ಸಂಚು ರೂಪಿಸುತ್ತಿದ್ದ ಎನ್ನಲಾಗಿದೆ.

ಬಳ್ಳಾರಿಯ ಕೌಲ್ ಬಜಾರ್, ಬ್ರೂ ಸ್ ಪೇಟ್, ಕುರುಗೋಡು ಠಾಣೆ, ಗಂಗಾವತಿ ಹಾಗೂ ಕೊಪ್ಪಳದ ಪೊಲೀಸ್ ಠಾಣೆಗಳಲ್ಲಿ ರಂಗಾರೆಡ್ಡಿ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದವು.

***

ಕೆಪಿಎಸ್ ಸಿ ಪರೀಕ್ಷೆ ಉತ್ತರಗಳನ್ನು ವೆಬ್ ಸೈಟ್ ನಲ್ಲಿ ನೋಡಿ

ಕರ್ನಾಟಕ ಲೋಕಸೇವಾ ಆಯೋಗವು ವಿವಿಧ ಹುದ್ದೆಗಳ ನೇಮಕಕ್ಕಾಗಿ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯ ನಿರ್ದಿಷ್ಟ ಪತ್ರಿಕೆಗಳ ಉತ್ತರಗಳನ್ನು ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ.

ಪ್ರಥಮ ದರ್ಜೆ ಪರಿವೀಕ್ಷಣಾಧಿಕಾರಿ ದರ್ಜೆ, ಸಹಕಾರ ಸಂಘ ನಿರೀಕ್ಷಕರು, ತಾಂತ್ರಿಕೆ ಶಿಕ್ಷಣ ಇಲಾಖೆಯ ನಾನಾ ವಿಷಯಗಳ ಉಪನ್ಯಾಸಕರು ಹಾಘೂ ವಾರ್ತಾ ಸಹಾಯಕರ ಹುದ್ದೆಗಳಿಗೆ ನಡೆಸಿದ ಪರೀಕ್ಷೆಯ ಉತ್ತರಗಳನ್ನು http://kpsc.kar.nic.in ತಾಣದಲ್ಲಿ ವೀಕ್ಷಿಸಬಹುದು.

ಅಭ್ಯರ್ಥಿಗಳು ತಮ್ಮ ಆಕ್ಷೇಪಣೆಗಳನ್ನು ಆ.27ರೊಳಗೆ ಆಯೋಗದ ಕೇಂದ್ರ ಕಚೇರಿಯಲ್ಲಿ ಸಲ್ಲಿಸಬಹುದು.

***

ರೈಲ್ವೇ ಕೌಶಲ ಪರೀಕ್ಷೆ

ಇಂಗ್ಲೀಷ್ ಸ್ಟೆನೋಗ್ರಾಫರ್ ಹುದ್ದೆಗೆ ಸೆ. 8 ಹಾಗೂ 9 ರಂದು ಕೌಶಲ ಪರೀಕ್ಷೆ (aptitude exam) ನಡೆಸಲಿದೆ. ಅರ್ಹ ಅಭ್ಯರ್ಥಿಗಳಿಗೆ ಪ್ರವೇಶ ಪರೀಕ್ಷೆ ಪತ್ರಗಳನ್ನು ಕಳಿಸಲಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more