ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ದಕ್ಷಿಣ ಮುಂಬಯಿ ನಗರಿಯಲ್ಲಿ ಕಟ್ಟಡ ಕುಸಿದು ಐದು ಸಾವು
ಮುಂಬಯಿ, ಆಗಸ್ಟ್ 18 : ದಕ್ಷಿಣ ಮುಂಬಯಿ ನಗರದಲ್ಲಿ ಕಟ್ಟಡವೊಂದು ಕುಸಿದು ಐವರು ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ಶನಿವಾರ ವರದಿಯಾಗಿದೆ.
ಲ್ಯಾಮಿಂಗ್ ಟನ್ ನಲ್ಲಿರುವ ಐದು ಅಂತಸ್ತಿನ ಕಟ್ಟಡ ಕುಸಿದು, ಶುಕ್ರವಾರ ರಾತ್ರಿ ಈ ದುರಂತ ಸಂಭವಿಸಿದೆ. ಅನೇಕರು ಕಟ್ಟಡದಿಂದ ಹೊರಕ್ಕೆ ಓಡಿ, ಅಪಾಯದಿಂದ ಪಾರಾಗಿದ್ದಾರೆ. ಐವರ ಸಾವನ್ನು ಅಗ್ನಿಶಾಮಕ ದಳ ಖಚಿತ ಪಡಿಸಿದೆ.
ಗಾಯಗೊಂಡವರನ್ನು ಬಿ.ವೈ.ಎಲ್.ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ.
(ಏಜನ್ಸೀಸ್)
Comments
Story first published: Saturday, August 18, 2007, 5:30 [IST]