ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖಗೋಳದತ್ತ ವಿಜ್ಞಾನಿಗಳ ಲಕ್ಷ್ಯ ಉದ್ದ ಬಾಲದ ನಕ್ಷತ್ರ ಪ್ರತ್ಯಕ್ಷ

By Staff
|
Google Oneindia Kannada News

ಇಂದೋರ್, ಆಗಸ್ಟ್ 17 : ಭೂಮಿಯಿಂದ ಸುಮಾರು 350 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿ ಉದ್ದ ಬಾಲವಿರುವ ನಕ್ಷತ್ರವೊಂದು ಪ್ರತ್ಯಕ್ಷವಾಗಿ ಖಗೋಳಶಾಸ್ತ್ರಜ್ಞರನ್ನು ಅಚ್ಚರಿಗೊಳಿಸಿದೆ.

ಸೀಟಸ್ ಎಂಬ ನಕ್ಷತ್ರಪುಂಜದಲ್ಲಿರುವ ಮೀರಾ ಎಂಬ ಈ ತಾರೆ ಪ್ರಥಮ ಬಾರಿ ಗೋಚರಿಸಿದ್ದು ಅದರ ಬಾಲದ ಉದ್ದವೇ 13 ಜ್ಯೋತಿರ್ವರ್ಷಗಳಷ್ಟಿದೆ. ಸೂರ್ಯನಿಂದ ಪ್ಲುಟೋ ಇರುವ ದೂರದ 20 ಸಾವಿರ ಪಟ್ಟು ಈ ಬಾಲದ ಉದ್ದ!

ಗ್ಯಾಲಕ್ಸಿ ಇವ್ಯಾಲ್ಯುವೇಷನ್ ಎಕ್ಸ್‌ಪ್ಲೋರರ್ ತನ್ನ ಅಲ್ಟ್ರಾ ವಯೋಲೆಟ್ ರೇಡಿಯೇಷನ್ ಸ್ಕ್ಯಾನಿಂಗ್ ಮುಖಾಂತರ ಈ ವಿಶಿಷ್ಟಮಯ ನಕ್ಷತ್ರ ಮತ್ತು ಅದರ ಬಾಲವನ್ನು ಗುರುತಿಸಲಾಗಿದೆ ಎಂದು ಇಲ್ಲಿನ ಖಗೋಳ ವಿಜ್ಞಾನಿ ಡಾ.ರಾಮ್ ಎಸ್. ಶ್ರೀವಾಸ್ತವ ಅವರು ಹೇಳಿದ್ದಾರೆ.

ಕ್ಯಾಲಿಫೋರ್ನಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಕ್ರಿಸ್ಟೋಫರ್ ಮಾರ್ಟಿನ್ ಈ ಸಂಗತಿಯನ್ನು ಇತ್ತೀಚೆಗೆ ಸುಪ್ರಸಿದ್ಧ ನಿಯತಕಾಲಿಕ ನೇಚರ್‌ನಲ್ಲಿ ದಾಖಲಿಸಿದ್ದರು.

ಶ್ರೀವಾಸ್ತವ ಅವರ ಪ್ರಕಾರ, ಮೀರಾ ಅಂದರೆ ಲ್ಯಾಟಿನ್ ಭಾಷೆಯಲ್ಲಿ ಅತ್ಯದ್ಭುತ. ಪ್ರಥಮ ಬಾರಿ ಇಂಥ ವಿಸ್ಮಯ ಕಂಡುಬಂದಿದ್ದರಿಂದ ವಿಜ್ಞಾನಿಗಳಲ್ಲಿ ಸೋಜಿಗ ಹುಟ್ಟಿಸಿದೆ. ನಕ್ಷತ್ರದ ಹೊರಪದರ ಹೊರಗೆಡಹುತ್ತಿರುವ ಕಾರ್ಬನ್, ಆಮ್ಲಜನಕ ಮುಂತಾದ ಅನಿಲಗಳಿಂದ ಈ ಬಾಲ ಸೃಷ್ಟಿಯಾಗಿದೆ. ಕಳೆದ 30 ಸಾವಿರ ವರ್ಷಗಳಿಂದ ಈ ಅನಿಲಗಳನ್ನು ಮೀರಾ ಹೊರಗೆಡಹುತ್ತಿದ್ದು, ಪ್ರತಿ ಸೆಕೆಂಡಿಗೆ 130 ಕಿ.ಮೀ. ಉದ್ದ ಅದರ ಬಾಲ ಬೆಳೆಯುತ್ತಿದೆ. ಅದೀಗ ಉಲ್ಕೆಯಂತೆ ಗೋಚರವಾಗುತ್ತಿದೆ.

(ಯುಎನ್ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X