ಮನಿಲಾದಲ್ಲಿ ಆದಿತ್ಯ ಬಿರ್ಲಾ ಮಿನಾಕ್ಸ್ ಘಟಕ ಉದ್ಘಾಟನೆ
ಮನಿಲಾ, ಆಗಸ್ಟ್ 17 : ಆದಿತ್ಯ ಬಿರ್ಲಾ ಮಿನಾಕ್ಸ್ನ ಘಟಕವನ್ನು ಫಿಲಿಪೈನ್ಸ್ನ ರಾಜಧಾನಿ ಮನಿಲಾದಲ್ಲಿ ಫಿಲಿಪೈನ್ಸ್ನ ಅಧ್ಯಕ್ಷೆ ಗ್ಲೋರಿಯಾ ಮೆಕಪಗಲ್ ಅರೋಯೋ ಅವರು ಬುಧವಾರ ಉದ್ಘಾಟಿಸಿದರು.
ಜಾಗತಿಕವಾಗಿ 30 ಕೇಂದ್ರಗಳಲ್ಲಿ ಮಿನಾಕ್ಸ್ ತನ್ನ ವ್ಯಾಪರವನ್ನು ವಿಸ್ತರಿಸಿಕೊಂಡಿದೆ. ಫಿಲಿಪೈನ್ಸ್ನಲ್ಲಿ ಈಗ 200 ನೌಕರರಿದ್ದು ವಿಶ್ವದ ಎಲ್ಲೆಡೆಯ ಗ್ರಾಹಕರಿಗೆ ಸೇವೆ ನೀಡುತ್ತಿದೆ.
ಏಷ್ಯಾದ ವಹಿವಾಟನ್ನು ನೋಡಿಕೊಳ್ಳುತ್ತಿರುವ ಚೀಫ್ ಆಪರೇಟಿಂಗ್ ಆಫೀಸರ್ ಶರದ್ ಜುಂಘಾರೆ ಅವರು ಈ ಸಂದರ್ಭದಲ್ಲಿ ಮಾತನಾಡಿ, ಬಲವಾದ ಮೂಲಸೌಕರ್ಯ, ಉನ್ನತ ಪ್ರತಿಭೆ, ಸರ್ಕಾರದ ಬೆಂಬಲಗಳಿಂದಾಗಿ ಫಿಲಿಪೈನ್ಸ್ನಲ್ಲಿ ವ್ಯಾಪಾರಕ್ಕೆ ಇನ್ನೂ ಹೆಚ್ಚಿನ ಅವಕಾಶ ದೊರೆಯಲಿದೆ ಎಂದರು.
ಫಿಲಿಪೈನ್ಸ್ನಲ್ಲಿ ಕಾರ್ಯನಿರ್ವಹಿಸಲು ಅತೀವ ಆನಂದವಾಗುತ್ತಿದೆ. ಘಟಕ ಸ್ಥಾಪಿಸಲಿಕ್ಕಾಗಿ ಜಾಗ ಹುಡುಕುವಾಗ ಮತ್ತು ಅಭಿವೃದ್ಧಿ ಕಾರ್ಯಗಳಿಗಾಗಿ ದೊರೆತ ಬೆಂಬಲ ಮತ್ತು ಉತ್ತೇಜನಕ್ಕಾಗಿ ನಾವು ಸರ್ಕಾರಕ್ಕೆ ಆಭಾರಿಯಾಗಿದ್ದೇವೆ. ಗ್ರಾಹಕರಿಗೆ ಉತ್ಕೃಷ್ಟ ಸೇವೆ ನೀಡಲು ಕಾತುರರಾಗಿದ್ದೇವೆ. ಕೆಲ ತಿಂಗಳುಗಳಿಂದ ಗ್ರಾಹಕರಿಗೆ ಫಿಲಿಪೈನ್ಸ್ನ ಸೇವೆ ಪಡೆಯಲು ಪ್ರಸ್ತಾಪಿಸುತ್ತಿದ್ದೇವೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ಫಲಕವನ್ನು ಅನಾವರಣ ಮಾಡಿ ಜ್ಯೋತಿ ಬೆಳಗುವ ಮುಖಾಂತರ ಈ ಘಟಕವನ್ನು ಉದ್ಘಾಟಿಸಿದ ನಂತರ ಗ್ಲೋರಿಯಾ ಮೆಕಪಗಲ್ ಅರೋಯೋ ಅವರು ಎಲ್ಲ ನೌಕರರೊಡನೆ ಉಭಯ ಕುಶಲೋಪರಿ ನಡೆಸಿ ಅಲ್ಲಿ ನಡೆಯುತ್ತಿರುವ ಕೆಲಸವನ್ನು ಶ್ಲಾಘಿಸಿದರು.
ಆದಿತ್ಯ ಬಿರ್ಲಾ ಗ್ರೂಪ್ನ ಭಾಗವಾಗಿರುವ ಆದಿತ್ಯ ಬಿರ್ಲಾ ನುವೋದ ಉಪಘಟಕ ಈಗ ಸ್ಥಾಪಿತವಾಗಿರುವ ಮಿನಾಕ್ಸ್. ಫಿಲಿಪೈನ್ಸ್ ಸೇರಿದಂತೆ ಭಾರತ, ಕೆನಡಾ, ಜರ್ಮನಿ, ಹಂಗರಿ, ಯುನೈಟೆಡ್ ಕಿಂಗ್ಡಮ್, ಅಮೆರಿಕಗಳಲ್ಲಿರುವ 30 ಕೇಂದ್ರಗಳಲ್ಲಿ 11 ಸಾವಿರಕ್ಕೂ ಹೆಚ್ಚಿನ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಒಟ್ಟು 28 ಭಾಷೆಗಳಲ್ಲಿ ಗ್ರಾಹಕ ಸೇವೆ ಸಲ್ಲಿಸಲಾಗುತ್ತಿದೆ.
ಆಟೋಮೋಟೀವ್, ಹಣಕಾಸು, ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಾವಿರಕ್ಕೂ ಹೆಚ್ಚಿನ ಕಂಪನಿಗಳಿಗೆ ಆದಿತ್ಯ ಬಿರ್ಲಾ ಮಿನಾಕ್ಸ್ ಉತ್ಕೃಷ್ಟ ಸೇವೆ ಸಲ್ಲಿಸುತ್ತಿದೆ. ಗುಣಮಟ್ಟಕ್ಕೆ, ದತ್ತ ಭದ್ರತೆಗೆ ಮತ್ತು ಗ್ರಾಹಕರ ಗೌಪ್ಯತೆಗೆ ಹೆಚ್ಚಿನ ಆದ್ಯತೆ ನೀಡುವ ಮಿನಾಕ್ಸ್ ಸಿಓಪಿಸಿ 2000, ಐಎಸ್ಓ 9001:2000 ಮತ್ತು ಐಎಸ್ಓ 27001 ಸರ್ಟಿಫಿಕೇಟ್ಗಳನ್ನು ಪಡೆದಿದೆ.
(ದಟ್ಸ್ಕನ್ನಡ ವಾರ್ತೆ)