ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿರುಪತಿ ತಿಮ್ಮಪ್ಪನಿಗೆ 15 ಲಕ್ಷದ ಬಂಗಾರದ ತಟ್ಟೆ ಕಾಣಿಕೆ

By Staff
|
Google Oneindia Kannada News

ಬೆಂಗಳೂರು ಮೂಲದ ಭಕ್ತರೊಬ್ಬರು ಜಗತ್ತಿನ ಅತೀ ಶ್ರೀಮಂತ ದೇವರು ತಿರುಪತಿ ತಿಮ್ಮಪ್ಪನಿಗೆ 15 ಲಕ್ಷ ಮೌಲ್ಯದ ಬಂಗಾರದ ತಟ್ಟೆಯನ್ನು ಕಾಣಿಕೆಯಾಗಿ ಅರ್ಪಿಸಿದ್ದಾರೆ.

ಎಮ್.ಆರ್.ಎಸ್.ಹೇಮಾ ರವಿಚಂದ್ರನ್ ಎಂಬ ಭಕ್ತೆ ಒಂದುವರೆ ಕಿ.ಗ್ರಾಂ. ತೂಗುವ ಬಂಗಾರದ ತಟ್ಟೆಯನ್ನು ಟಿಟಿಡಿಯ ಜಂಟಿ ನಿರ್ವಾಹಕ ಅಧಿಕಾರಿ ಬಾಲತಮ್ಮಯ್ಯ ಅವರಿಗೆ ಗುರುವಾರ ನೀಡಿದರು.

ತಟ್ಟೆಯನ್ನು ಸಹಸ್ರ ಕಲಸಾಭಿಷೇಕಂ ಮುಂತಾದ ಪೂಜೆಗಳಿಗೆ ಉಪಯೋಗಿಸಲಾಗುತ್ತದೆ ಎಂದು ಬಾಲತಮ್ಮಯ್ಯ ಹೇಳಿದ್ದಾರೆ.

***

ಆಡಳಿತ ಸುಲಭೀಕರಣಕ್ಕಾಗಿ ಇನ್ನೆರಡು ಹೊಸ ಜಿಲ್ಲೆ ರಚನೆ

ಇನ್ನಷ್ಟು ಜಿಲ್ಲೆ ರಚಿಸುವ ಇಂಗಿತವನ್ನು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವ್ಯಕ್ತಪಡಿಸಿದ್ದು, ಯಾದಗಿರಿ ಮತ್ತು ಚಿಕ್ಕೋಡಿ ಜಿಲ್ಲೆ ರಚನೆಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಇತ್ತೀಚೆಗಷ್ಟೇ ರಾಮನಗರ, ಚಿಕ್ಕಾಬಳ್ಳಾಪುರ ತಾಲೂಕುಗಳನ್ನು ಜಿಲ್ಲೆಗಳಾಗಿ ಸರ್ಕಾರ ಪರವರ್ತಿಸಿದೆ.

***

ಅಲ್ಲಮನ ಜನ್ಮ ಸ್ಥಳ ಯಾವುದು?

ಈವರೆಗೆ ಅಲ್ಲಮ ಪ್ರಭುವಿನ ಜನ್ಮಸ್ಥಳವನ್ನು ಬಳ್ಳಿಗಾವೆ ಎಂದು ಎಲ್ಲರೂ ಭಾವಿಸಿದ್ದಾರೆ.ಆದರೆ ಇದು ಸುಳ್ಳು ಎಂದು ವಿಮರ್ಶಕ ಜಿ.ಎಸ್.ಸಿದ್ದಲಿಂಗಯ್ಯ ಹೇಳಿದ್ದಾರೆ.

ಅಲ್ಲಮನ ತಂದೆಯ ಊರು ಬಳ್ಳಿಗಾವೆ. ಪುರುಷ ಪ್ರಧಾನ ಸಮಾಜದಲ್ಲಿ ಅಪ್ಪನ ಊರಿನಿಂದಲೇ ಮಗನನ್ನು ಗುರ್ತಿಸುವ ಪದ್ಧತಿ ಇದೆ. ಹೀಗಾಗಿ ಅಲ್ಲಮನ ಹುಟ್ಟೂರು ಬಳ್ಳಿಗಾವೆ ಎಂದು ಬಿಂಬಿಸಲಾಗಿದೆ. ವಾಸ್ತವವಾಗಿ ಅಲ್ಲಮ ಜನಿಸಿದ್ದು ಅವರ ತಾಯಿಯ ಊರಾದ ಕರೂರು(ಅದೀಗ ಶಿಕಾರಿಪುರ ತಾಲೂಕಿನ ಕೆರೂರು)ನಲ್ಲಿ ಎಂದು ಉಪನ್ಯಾಸವೊಂದರಲ್ಲಿ ಸಿದ್ದಲಿಂಗಯ್ಯ ವಿವರಣೆ ನೀಡಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X