• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊಳೆಗೇರಿ ಸೇರಿದ ಬುಧಿಯಾ ಜೀವನದಲ್ಲಿ ವಿಧಿಯ ಅಟ್ಟಹಾಸ

By Staff
|


ಭುವನೇಶ್ವರ, ಆಗಸ್ಟ್ 16 : ಜೀವನವೆಂಬ ಮ್ಯಾರಾಥಾನ್‌ನಲ್ಲಿ ವಂಡರ್‌ಬಾಯ್ ಬುಧಿಯಾನನ್ನು ವಿಧಿ ಹಿಂದೆ ಹಾಕಿದೆ.

ಬಡತನವನ್ನು ಜಯಿಸಬೇಕೆಂದು ಪಣತೊಟ್ಟಿದ್ದ ಪುಟ್ಟ ಕಾಲ್ಗಳಿಗೆ ವಿಧಿ ತೊಡರುಗಾಲು ಹಾಕಿದೆ. ಬುಧಿಯಾ ಈಗ ಮತ್ತೆ ಕೊಳೆಗೇರಿಗೆ ಮರಳಿ ತನ್ನ ಎಂದಿನ ಜೀವನವನ್ನು ಆರಂಭಿಸಿದ್ದಾನೆ.

ಬುಧಿಯಾಗೆ ಹೊಡೆದು ಬಡಿದು ಸರಿಯಾಗಿ ಊಟ ನೀಡದ ಆರೋಪ ಹೊತ್ತಿದ್ದ ತರಬೇತುದಾರ ಬಿರಂಚಿದಾಸ್‌ನನ್ನು ಪೊಲೀಸರು ಬಂಧಿಸಿದ ಹಿನ್ನೆಲೆಯಲ್ಲಿ ಬುಧಿಯಾಗೆ ಕೊಳೆಗೇರಿಗೆ ಮರಳದೆ ಬೇರೆ ದಾರಿಯಿರಲಿಲ್ಲ.

ಕೇವಲ ಐದು ವರುಷದ ಬುಧಿಯಾನನ್ನು ಹಣದಾಸೆಗಾಗಿ ಕೇವಲ 800 ರು.ಗೆ ಅವನ ತಾಯಿ ಬಿರಂಚಿದಾಸ್‌ಗೆ ಒಪ್ಪಿಸಿದ್ದಳು. ಅನಂತರ ಮ್ಯಾರಾಥಾನ್ ಮೇಲೆ ಮ್ಯಾರಾಥಾನ್ ಓಡಿದ್ದ ಬುಧಿಯಾ ವಿಶ್ವದ ಗಮನ ಸೆಳೆದಿದ್ದ.

ನೆರೆಹೊರೆಯವರ ಪಾತ್ರೆಗಳನ್ನು ಶುಚಿ ಮಾಡಿ ಜೀವನ ಹೊರೆದುಕೊಳ್ಳುವ ಬುಧಿಯಾನ ತಾಯಿ ಸುಕಂತಿ ಸಿಂಗ್‌ಗೆ ಈಗ ಎಲ್ಲವೂ ಅಯೋಮಯ. ತನಗೆ ಬರುವ ಆದಾಯದಿಂದ ತನ್ನನ್ನೇ ಸಾಕಿಕೊಳ್ಳದ ತಾನು ಬುಧಿಯಾನ ಓದಿಗೆ, ಓಟಕ್ಕೆ ಎಲ್ಲಿಂದ ಹಣ ತರಬೇಕೆಂದು ಗೋಳಾಡುತ್ತಿದ್ದಾಳೆ.

ಬುಧಿಯಾ ತನ್ನ ಮಗು ಮಾತ್ರವಲ್ಲ ಆತ ಎಲ್ಲರಿಗೂ ಸೇರಿದವನು. ಬುಧಿಯಾನಿಗೆ ಮನೆ ಮತ್ತು ಯೋಗ್ಯ ತರಬೇತುದಾರನನ್ನು ನೀಡಬೇಕೆಂದು ಸುಕಂತಿ ಬೇಡಿಕೊಂಡಿದ್ದಾಳೆ.

ಪ್ರತಿನಿತ್ಯ ಉತ್ಕೃಷ್ಟ ಊಟ, ಒಳ್ಳೆಯ ತರಬೇತಿ ಪಡೆಯುತ್ತ ಓಲಂಪಿಕ್‌ನಲ್ಲಿ ಓಡುವ ಆಸೆ ಬಿತ್ತಿಸಿಕೊಂಡಿದ್ದ ಬುಧಿಯಾ ಈಗ ಉಳಿದ ಮಕ್ಕಳಂತೆ ಕೊಳೆಗೇರಿಯಲ್ಲಿ ಆಟವಾಡುತ್ತ ಕಾಲಕಳೆಯುತ್ತಿದ್ದಾನೆ.

ಉತ್ತಮ ತರಬೇತುದಾರ ಸಿಕ್ಕರೆ ಮತ್ತೆ ಓಟವನ್ನು ಪ್ರಾರಂಭಿಸುತ್ತೇನೆ ಎನ್ನುವ ಬುಧಿಯಾ ಮುಖದ ಮೇಲೆ ಆಶಾಭಾವನೆ ಇನ್ನೂ ಮಾಸಿಲ್ಲ. ಓರಿಸ್ಸಾ ಸರ್ಕಾರ ಕೂಡ ಆತನ ತರಬೇತಿ ಮತ್ತು ವಿದ್ಯಾಭ್ಯಾಸದ ಭಾರ ಹೊರುವುದಾಗಿ ಹೇಳಿದೆ.

ಆದರೆ ಈ ಪುಟ್ಟ ಬಾಲಕ ಉತ್ತಮ ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸದೆ ಮತ್ತೆ ಓಟಕ್ಕೆ ನಿಲ್ಲಬೇಕೆ ಎಂಬುದು ಸದ್ಯದ ಪ್ರಶ್ನೆ.

(ಯುಎನ್ಐ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more