ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏರ್ ಟೆಲ್ ಮತ್ತು ಹಚ್ ಗ್ರಾಹಕರಿಗೆ ಕೆಂಡದಂಥ ಕೋಪ!

By Staff
|
Google Oneindia Kannada News

ಬೆಂಗಳೂರು, ಆಗಸ್ಟ್ 14 : ದರ ಕಡಿಮೆ ಮಾಡಿದಾಗ ಪುಟಗಟ್ಟಲೆ ಜಾಹೀರಾತು ನೀಡಿ, ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವ ಮೊಬೈಲ್ ಕಂಪನಿಗಳು, ಈಗ ಸದ್ದಿಲ್ಲದೇ ಕರೆ ದರಗಳನ್ನು ಹೆಚ್ಚಿಸಿವೆ.

ಹಚ್ ಮತ್ತು ಏರ್ ಟೆಲ್ ಹೊಸ ದರಗಳು ಸೋಮವಾರದಿಂದಲೇ ಜಾರಿಗೆ ಬಂದಿದ್ದು, ಗ್ರಾಹಕರು ಸಿಡಿಮಿಡಿಕೊಂಡಿದ್ದಾರೆ. ಆದರೆ ಸ್ಥಳೀಯ ಕರೆ ಮತ್ತು ಎಸ್ಎಂಎಸ್ ದರವನ್ನು ರೂ.1.00ರಿಂದ ರೂ.1.20ಕ್ಕೆ ಹೆಚ್ಚಳ ಮಾಡಲಾಗಿದೆ.

ಹಚ್ ಮತ್ತು ಏರ್ ಟೆಲ್ ನ ಪ್ರೀಪೇಯ್ಡ್ ಚಂದಾದಾರರಿಗೆ ದರ ಹೆಚ್ಚಳ, ಈಗ ಅನುಭವಕ್ಕೆ ಬರುತ್ತಿದೆ.ಏರ್ ಟೆಲ್ ನಿಂದ ಏರ್ ಟೆಲ್ ಗೆ, ಹಚ್ ನಿಂದ ಹಚ್ ಗೆ ಕರೆ ಮಾಡುವ ಗ್ರಾಹಕರಿಗೆ ಈ ಹೆಚ್ಚಳ ಅನ್ವಯಿಸಲಿದೆ. ಇತ್ತೀಚೆಗಷ್ಟೇ ಈ ಎರಡೂ ಕಂಪನಿಗಳು ಎಸ್ ಟಿಡಿ ದರಗಳನ್ನು ಹೆಚ್ಚಳ ಮಾಡಿದ್ದವು.

ದಿನೇದಿನೇ ಹೆಚ್ಚುತ್ತಿರುವ ಗ್ರಾಹಕರಿಗೆ ಸೇವೆ ಒದಗಿಸಲು, ಹೆಚ್ಚಿನ ಬಂಡವಾಳ ಅತ್ಯಗತ್ಯ. ಈ ನಿಟ್ಟಿನಲ್ಲಿ ದರ ಹೆಚ್ಚಳ ಅನಿವಾರ್ಯ ಎಂದು ಮೊಬೈಲ್ ಕಂಪನಿಗಳು ಹೇಳಿವೆ.

ಬಿಎಸ್ಎನ್ಎಲ್, ರಿಲಯನ್ಸ್, ಟಾಟಾ ಇಂಡಿಕಾಮ್, ಸ್ಪೈಸ್ ಮತ್ತಿತರ ಕಂಪನಿಗಳು, ದರ ಹೆಚ್ಚಳದ ಬಗ್ಗೆ ಚಿಂತನೆ ನಡೆಸಿವೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X