ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪಘಾತ : ಮಾಜಿ ಸಚಿವ ಜಾರ್ಜ್ ಫರ್ನಾಂಡಿಸ್ ಪಾರು

By Staff
|
Google Oneindia Kannada News

ಕೃಷ್ಣಾನಗರ್ (ಪಶ್ಚಿಮ ಬಂಗಾಲ), ಆಗಸ್ಟ್ 14 : ಎನ್ ಡಿಎ ಸಂಚಾಲಕ ಮತ್ತು ಕೇಂದ್ರದ ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್, ದೊಡ್ಡ ಅಪಘಾತವೊಂದರಿಂದ ಮಂಗಳವಾರ ಪಾರಾಗಿದ್ದಾರೆ.

ಕೋಲ್ಕತಾಗೆ 80ಕಿ.ಮೀ ದೂರದ ನಾಡಿಯ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ರಸ್ತೆ ಅಪಘಾತ ಸಂಭವಿಸಿದೆ. ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಜಾರ್ಜ್, ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಅವರ ಕಾರಿನ ಮುಂದೆ ಪೊಲೀಸರ ಪೈಲಟ್ ಕಾರು ಹೋಗುತ್ತಿತ್ತು. ಎದುರಿಗೆ ಬಂದ ತ್ರಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಪೈಲಟ್ ಕಾರನ್ನು ತಕ್ಷಣ ನಿಲ್ಲಿಸಲಾಯಿತು. ಈ ಕಾರಿಗೆ ಫರ್ನಾಂಡಿಸ್ ಕಾರು ಡಿಕ್ಕಿ ಹೊಡೆದು, ಕಾರಿನ ಮುಂಭಾಗ ನುಜ್ಜುಗುಜ್ಜಾಯಿತು. ಬ್ರೇಕ್ ಹಾಕುವಷ್ಟು ಸಮಯ ಸಹಾ ಆಗ ಇರಲಿಲ್ಲ.

ಆದರೆ ಅಚ್ಚರಿ ರೀತಿಯಲ್ಲಿ ಫರ್ನಾಂಡಿಸ್ ಅಪಾಯದಿಂದ ಪಾರಾಗಿದ್ದಾರೆ. ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರು ಸುರಕ್ಷಿತವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

(ಯುಎನ್ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X