ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದ ಮೊದಲ ರಾಷ್ಟ್ರಧ್ವಜ ಕಳೆದಿದೆ! ಹುಡುಕಿಕೊಡಿ!

By Staff
|
Google Oneindia Kannada News

ನವದೆಹಲಿ, ಆಗಸ್ಟ್ 14 : ಬುಧವಾರ 60ನೇ ಸ್ವಾತಂತ್ರ್ಯ ದಿನಾಚರಣೆ . ಈ ಹೊತ್ತಿನಲ್ಲಿ ದೇಶದ ಮೊದಲ ಐತಿಹಾಸಿಕ ರಾಷ್ಟ್ರಧ್ವಜ ಕಳೆದು ಹೋಗಿರುವ ಸಂಗತಿ ಬಯಲಾಗಿದೆ.

1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಐತಿಹಾಸಿಕ ಸಂದರ್ಭದಲ್ಲಿ ಹಾರಿಸಲಾಗಿದ್ದ ಧ್ವಜ ಕಳೆದು ಹೋಗಿದೆ. ಅದೇ ರೀತಿ ಆಗಸ್ಟ್ 14,1947ರಂದು ಮಧ್ಯರಾತ್ರಿ ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ದೇಶದ ಮೊಟ್ಟ ಮೊದಲ ಪ್ರಧಾನಿ ಜವಹರಲಾಲ್ ನೆಹರು ಹಾರಿಸಿದ್ದ ಧ್ವಜವೂ ಕಳೆದು ಹೋಗಿದೆ. ಅಂದು ಆ ಧ್ವಜಾರೋಹಣ ಸಮಾರಂಭದಲ್ಲಿ ಲಾರ್ಡ್ ಮೌಂಡ್ ಬ್ಯಾಟನ್ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.

ಮಾರನೇ ದಿನ ಅಂದರೆ ಆಗಸ್ಟ್ 15ರಂದು ಬೆಳಗ್ಗೆ 8.30ಕ್ಕೆ ಇಂಡಿಯಾ ಗೇಟ್ ನಲ್ಲಿ ಹಾರಿಸಲಾದ ಧ್ವಜ ಸಹಾ, ನಾಪತ್ತೆಯಾಗಿದೆ. ಆಗಸ್ಟ್ 16ರಂದು ಕೆಂಪುಕೋಟೆ ಮೇಲೆ ಹಾರಿಸಲಾಗಿದ್ದ ಧ್ವಜ ಸಹಾ ಪತ್ತೆ ಇಲ್ಲ. ಐತಿಹಾಸಿಕ ಸಂದರ್ಭದಲ್ಲಿ ಹಾರಿಸಲಾದ ರಾಷ್ಟ್ರಧ್ವಜಗಳು ಈಗ ಎಲ್ಲಿದೆ ಎಂದರೆ ಯಾರಲ್ಲೂ ಉತ್ತರವಿಲ್ಲ.ಈ ಬಗ್ಗೆ ಯಾವುದೇ ಸರ್ಕಾರಿ ದಾಖಲೆಗಳಿಲ್ಲ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X