ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ನೊಂದಿಷ್ಟು , ಮತ್ತೊಂದಿಷ್ಟು ವಿಚಿತ್ರಾನ್ನ ಪುಸ್ತಕ ಲೋಕಾರ್ಪಣೆ

By Staff
|
Google Oneindia Kannada News

Vichitranna book release function heldಬೆಂಗಳೂರು, ಆಗಸ್ಟ್ 12: ದಟ್ಸ್ ಕನ್ನಡ ಅಂಕಣಕಾರ ಶ್ರೀವತ್ಸ ಜೋಷಿಯವರ ಇನ್ನೊಂದಿಷ್ಟು ವಿಚಿತ್ರಾನ್ನ ಹಾಗೂ ಮತ್ತೊಂದಿಷ್ಟು ವಿಚಿತ್ರಾನ್ನ ಎಂಬ ಪುಸ್ತಕಗಳು ಲೋಕಾರ್ಪಣೆಗೊಂಡಿತು.

ನಗರದ ಬಸವನಗುಡಿಯಲ್ಲಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಹನಿಗವನಗಳ ಬ್ರಹ್ಮ ಎಂದು ಖ್ಯಾತರಾದ ಕವಿ ಎಚ್ .ಡುಂಡಿರಾಜ್ ಅವರು ಶ್ರೀವತ್ಸ ಜೋಷಿಯವರ ಎರಡು ಪುಸ್ತಕಗಳನ್ನು ಅನಾವರಣಗೊಳಿಸಿದರು. ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ವಿಜಯಕರ್ನಾಟಕ ಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್ ಹಾಗೂ ಶ್ರೀವತ್ಸ ಜೋಶಿಯವರ ಅನಿವಾಸಿ ಮಿತ್ರ ವಲ್ಲೀಶ ಶಾಸ್ತ್ರಿಯವರು ಆಗಮಿಸಿದ್ದರು.

ಸತತವಾಗಿ ಸುಮಾರು 250 ವಾರಕ್ಕಿಂತ ಅಧಿಕ ಕಾಲ ಪ್ರತಿವಾರ ಅಂಕಣ ಬರೆಯುತ್ತಿರುವ ಶ್ರೀವತ್ಸ ಜೋಷಿಯವರಿಗೆ ದಟ್ಸ್ ಕನ್ನಡ. ಕಾಂ ವತಿಯಿಂದ ಸನ್ಮಾನಿಸಲಾಯಿತು. ನಂತರ ವಿಶ್ವೇಶ್ವರ ಭಟ್ ಹಾಗೂ ಪಿ.ಜಿ.ಆರ್. ಸಿಂಧ್ಯಾರವರು ಕೂಡ ಶಾಲು ಹೊದೆಸಿ ಜೋಶಿಯವರನ್ನು ಆತ್ಮೀಯವಾಗಿ ಸನ್ಮಾನಿಸಿದರು.

ಈ ಸುಂದರ ಸಮಾರಂಭಕ್ಕೆ ಹಿರಿಯ ನಟ ಹೆಚ್. ಸೋಮಶೇಖರ್ ರಾವ್ ,ಕವಿ ಲಕ್ಷ್ಮಿ ನಾರಾಯಣ ಭಟ್ಟ, ಶತಾವಧಾನಿ ಆರ್. ಗಣೇಶ್, ಲೇಖಕ ವಸುಧೇಂದ್ರ, ಡಾ. ಗುರುಪ್ರಸಾದ್ ಕಾಗಿನೆಲೆ, ಲೇಖಕಿ ಜ್ಯೋತಿ ಮಹದೇವ್ ಮುಂತಾದ ಗಣ್ಯರು ಆಗಮಿಸಿ ಕಳೆ ಕಟ್ಟಿದರು.

ಸಮಾರಂಭದ ನಿರೂಪಣೆಯನ್ನು ಶ್ರೀಮತಿ ಅಂಜಲಿ ರಾಮಣ್ಣರವರು ಅಚ್ಚುಕಟ್ಟಾಗಿ ಮಾಡಿದರು. ಸಮಾರಂಭದ ನಿರ್ವಹಣೆಯನ್ನು ದಟ್ಸ್ ಕನ್ನಡ ಬಳಗದ ಸಂಪಾದಕ ಎಸ್. ಕೆ. ಶಾಮ ಸುಂದರ್ ವಹಿಸಿಕೊಂಡಿದ್ದರು.

ಮೈಸೂರಿನ ಗೀತಾ ಬುಕ್ ಹೌಸ್ ಅವರು ಪ್ರಕಟಿಸಿರುವ ಈ ಎರಡು ವಿಚಿತ್ರಾನ್ನದ ಪುಸ್ತಕಕ್ಕೆ ಜನರಿಂದ ಭಾರೀ ಬೇಡಿಕೆ ಕಂಡು ಬಂತು.

ಇದಲ್ಲದೆ ಅಪಾರ ಅಭಿಮಾನಿಗಳ ಬಳಗ ಶ್ರೀವತ್ಸ ಜೋಷಿಯವರಿಗೆ ಶುಭ ಹಾರೈಸಲು ನೆರೆದಿದ್ದರು.

ಇದನ್ನೂ ಓದಿ :
ಭಾನುವಾರ ಜೋಶಿಯವರ ಮತ್ತೆರಡು ವಿಚಿತ್ರಾನ್ನ ಬಿಡುಗಡೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X