• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅತ್ಯಾಚಾರಕ್ಕೊಳಗಾದ ಯುವತಿ ಸೇರಿದಂತೆ ನಾಲ್ವರ ಆತ್ಮಹತ್ಯೆ

By Staff
|


ಗುಲಬರ್ಗಾ, ಆಗಸ್ಟ್ 11 : ಅತ್ಯಾಚಾರಕ್ಕೆ ಒಳಗಾದ ಯುವತಿಯೋರ್ವಳು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ಬೆಳಿಗ್ಗೆ ಇಲ್ಲಿ ಘಟಿಸಿದೆ.

ತಾಜಾಸುಲ್ತಾನಪುರಿಯ ಮನೆಯಲ್ಲಿ ಏಕಾಂಗಿಯಾಗಿದ್ದಾಗ ಬಲಾತ್ಕಾರಕ್ಕೊಳಗಾದ 19ರ ಹರೆಯದ ರೇಣುಕಾ ತಕ್ಷಣವೇ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿದ ಅದೇ ಚಾಳಿನ 22 ವರ್ಷದ ರಾಜು ಚಳ್ಕಾರಿ ರೇಣುಕಾ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗಿದ್ದಾನೆ. ಅವಮಾನಕ್ಕೊಳಗಾದ ರೇಣುಕಾ ಫ್ಯಾನಿಗೆ ನೇಣು ಹಾಕಿಕೊಂಡಿದ್ದಾಳೆ.

ಆಕೆಯ ಪಾಲಕರು ಊರಿನಲ್ಲಿ ಇರಲಿಲ್ಲ. ನಂತರ ಬಂದ ರೇಣುಕಾಳ ಸಹೋದರ ಪೊಲೀಸರಿಗೋ ದೂರು ನೀಡಿದ್ದಾನೆ.

ಅತ್ಯಾಚಾರಿ ರಾಜು ತಲೆಮರೆಸಿಕೊಂಡಿದ್ದಾನೆ. ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿರುವ ಸುಪರಿಂಟೆಂಡೆಂಟ್ ಎಸ್.ಎಸ್.ನಾಯಕ್ ಪ್ರಕರಣವನ್ನು ದಾಖಲಿಸಿಕೊಂಡಿದ್ದು ರಾಜುನನ್ನು ಹುಡುಕುತ್ತಿದ್ದಾರೆ.

ಬಿಜಾಪುರದಲ್ಲಿಯೂ ಮೂವರ ಆತ್ಮಹತ್ಯೆ : ಇಬ್ಬರು ಅಪ್ರಾಪ್ತ ವಯಸ್ಕರು ಸೇರಿದಂತೆ ಮೂವರು ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕ್ಷಯದಿಂದ ಬಳಲುತ್ತಿದ್ದ 46 ವರ್ಷ ವಯಸ್ಸಿನ ಸಂಗಪ್ಪ ಬಾಳಪ್ಪ ಕಾವಟಗಿ ಜೀವನದಲ್ಲಿ ಜಿಗುಪ್ಸೆಗೊಂಡು ನೇಣು ಹಾಕಿಕೊಂಡು ಸಾವಿನ್ನಪ್ಪಿದ್ದಾನೆ.

ಮಾನಸಿಕ ಅಸ್ವಸ್ಥತೆಗೆ ಚಿಕಿತ್ಸೆ ಪಡೆಯುತ್ತಿದ್ದ 17ರ ಯುವಕ ರಾಜುಸಿಂಗ್ ಸಿದ್ದುಸಿಂಗ್ ಹಾಜೇರಿ ಮಾನಸಿಕ ತೊಳಲಾಟಕ್ಕೆ ಬೇಸತ್ತು ತೊಣಶ್ಯಾಲ್ ಗ್ರಾಮದಲ್ಲಿ ಮರಕ್ಕೆ ನೇಣು ಹಾಕಿಕೊಂಡು ಸತ್ತಿದ್ದಾನೆ.

ಮತ್ತೊಂದೆಡೆ ಕಾಖಂಡಿಕಿ ಗ್ರಾಮದಲ್ಲಿ ಫಿಟ್ಸ್‌ನಿಂದ ಬಳಲುತ್ತಿದ್ದ 17ರ ಯುವತಿ ದೀಪಾ ದೊಡ್ಡಮನಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮೂರೂ ಪ್ರಕರಣವನ್ನು ಬಬಲೇಶ್ವರ ಪೊಲೀಸರು ದಾಖಲಿಸಿಕೊಂಡಿದ್ದಾರೆ.

(ಯುಎನ್ಐ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more