ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನ ಚೆಮ್ಮನೂರು ಜ್ಯೂಯಲರ್ಸ್‌ನಲ್ಲಿ ದರೋಡೆ

By Staff
|
Google Oneindia Kannada News

ಬೆಂಗಳೂರಿನಲ್ಲಿರುವ ಚೆಮ್ಮನೂರು ಜ್ಯೂಯಲರ್ಸ್ ಗೆ ನುಗ್ಗಿದ ಮುಸುಕುಧಾರಿಗಳು, ಕೋಟ್ಯಂತರ ಮೌಲ್ಯದ ಚಿನ್ನಾಭರಣ ದೋಚಿದ್ದಾರೆ.

ಶನಿವಾರ ಬೆಳಗ್ಗೆ 10.30ರ ಸುಮಾರಿನಲ್ಲಿ ಕಮ್ಮನಹಳ್ಳಿ ಮುಖ್ಯರಸ್ತೆಯಲ್ಲಿರುವ ಚೆಮ್ಮನೂರು ಜ್ಯೂಯಲರ್ಸ್ ಗೆ ಗ್ರಾಹಕರಂತೆ, ನಾಲ್ವರು ದರೋಡೆಕೋರರು ಪ್ರವೇಶಿಸಿದರು. ನಂತರ ರಿವಾಲ್ವಾರ್ ತೋರಿಸಿ, ಸುಮಾರು 3ಕೋಟಿ ಮೌಲ್ಯದ 40ಕೆ.ಜಿ.ಚಿನ್ನವನ್ನು ಚೀಲಕ್ಕೆ ತುಂಬಿಕೊಂಡರು. ಕೆಲವೇ ಕ್ಷಣಗಳಲ್ಲಿ ಅಂಗಡಿ ಎದುರಿಗೆ ನಿಂತಿದ್ದ ಟಾಟಾ ಇಂಡಿಕಾ ಕಾರಲ್ಲಿ ಕೂತು ಪರಾರಿಯಾದರು.

***

ಹೈಟೆಕ್ ಭದ್ರತೆ : ಭಯವಿಲ್ಲದೇ ದೇಗುಲಕ್ಕೆ ಬರಬಹುದು!

ರಾಜ್ಯದ ಧರ್ಮಸ್ಥಳ, ಕೊಲ್ಲೂರು, ಚಾಮುಂಡಿ ಬೆಟ್ಟ, ಹೊರನಾಡು, ಕುಕ್ಕೆ ಮತ್ತಿತರ ಪ್ರದೇಶಗಳಲ್ಲಿನ ದೇವಸ್ಥಾನಗಳಲ್ಲಿ ಹೈಟೆಕ್ ಸುರಕ್ಷತೆ ಕಲ್ಪಿಸಲು ಸರ್ಕಾರ ಮುಂದಾಗಿದೆ.

ದೇಶದ ವಿವಿಧ ದೇವಸ್ಥಾನಗಳಲ್ಲಿ ಭಯೋತ್ಪಾದಕರು ನಡೆಸಿದ ದಾಳಿ ಹಿನ್ನೆಲೆಯಲ್ಲಿ ಈ ಬಗ್ಗೆ ಚಿಂತನೆ ನಡೆದಿದೆ. ದೇವಸ್ಥಾನಗಳಲ್ಲಿ ಸಿಸಿಟಿವಿ ಸೇರಿದಂತೆ ಹೈಟೆಕ್ ವ್ಯವಸ್ಥೆಗಳನ್ನು ಕಲ್ಪಿಸಲು ಸರ್ಕಾರ ಮುಂದಾಗಿದೆ.

***

ಪಿಯುಸಿ ಪೂರಕ ಪರೀಕ್ಷೆ ಫಲಿತಾಂಶ

ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ಫಲಿತಾಂಶ, ಈಗ http://puc.kar.nic.in/ ವೆಬ್ ಸೈಟ್ ನಲ್ಲಿ ಲಭ್ಯ.

ಶನಿವಾರ ಸಂಜೆ 4ಕ್ಕೆ ಅಥವಾ ಭಾನುವಾರ ಬೆಳಗ್ಗೆ ರಾಜ್ಯದ ಎಲ್ಲಾ ಕಾಲೇಜುಗಳಲ್ಲಿ ಫಲಿತಾಂಶ ಪ್ರಕಟಗೊಳ್ಳಲಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ.

***

ಮನಮೋಹನ್ ಸಿಂಗ್ ರಾಜೀನಾಮೆ ನೀಡಿಲ್ಲ

ಪ್ರಧಾನಿ ಸ್ಥಾನಕ್ಕೆ ಮನಮೋಹನ್ ಸಿಂಗ್ ರಾಜೀನಾಮೆ ನೀಡಲಿದ್ದಾರೆ ಎಂಬ ವದಂತಿಯನ್ನು ಸಚಿವ ದಾಸ್ ಮುನ್ಷಿ ತಳ್ಳಿಹಾಕಿದ್ದಾರೆ.

ಭಾರತ ಮತ್ತು ಅಮೆರಿಕ ನಾಗರಿಕ ಪರಮಾಣು ಸಹಕಾರ ಒಪ್ಪಂದವನ್ನು ಎಡಪಕ್ಷಗಳು ವಿರೋಧಿಸಿರುವುದರಿಂದ ಬೇಸತ್ತು, ರಾಜೀನಾಮೆಗೆ ಪ್ರಧಾನಿ ಮುಂದಾಗಿದ್ದಾರೆ ಎಂಬ ವದಂತಿ ದಟ್ಟವಾಗಿ ಹಬ್ಬಿತ್ತು. ಇದೆಲ್ಲ ಸುಳ್ಳು ಪ್ರಧಾನಿಯಾಗಿ ಮನಮೋಹನ್ ಸಿಂಗ್, ಪೂರ್ಣಾವಧಿ ಪೂರೈಸಲಿದ್ದಾರೆ ಎಂದು ದಾಸ್ ಮುನ್ಷಿ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X