ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಅನ್ಸಾರಿ ಗೆಲುವು ನಿಶ್ಚಿತ

By Staff
|
Google Oneindia Kannada News

ನವದೆಹಲಿ, ಆಗಸ್ಟ್ 10 : ಉಪ ರಾಷ್ಟ್ರಪತಿ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಡೆಯುತ್ತಿದೆ. ಇಂದು ಬೆಳಗ್ಗೆ 10ಗಂಟೆಯಿಂದ ಮತದಾನ ಆರಂಭವಾಗಿದೆ.

ಈ ಚುನಾವಣೆ ಕೇವಲ ಔಪಚಾರಿಕವಾಗಿದ್ದು, ಸಂಖ್ಯಾ ಬಲ ಹೊಂದಿರುವ ಯುಪಿಎ ಮತ್ತು ಎಡಪಕ್ಷಗಳ ಅಭ್ಯರ್ಥಿ ಹಮೀದ್ ಅನ್ಸಾರಿ ಗೆಲುವು ಅತಿ ಸುಲಭ ಎಂದು ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ.

788 ಸದಸ್ಯರ ಪೈಕಿ 425ಸದಸ್ಯರು ಅನ್ಸಾರಿ ಅವರನ್ನು ಬೆಂಬಲಿಸುವ ನಿರೀಕ್ಷೆ ಇದೆ. ರಾಷ್ಟ್ರಪತಿ ಚುನಾವಣೆಯಲ್ಲಿ ಗೆಲುವು ಸಾಧಿಸಲು 393ಮತಗಳು ಬೇಕು.

240 ಸದಸ್ಯರ ಎನ್ ಡಿಎ ಅಭ್ಯರ್ಥಿ ನಜ್ಮಾ ಹೆಫ್ತುಲ್ಲಾ ಮತ್ತು 81 ಸದಸ್ಯರ ಯುಎನ್ ಪಿಎ ಅಭ್ಯರ್ಥಿ ರಶೀದ್ ಮಸೂದ್ ಕಣದಲ್ಲಿದ್ದಾರೆ. ಈ ಸಲ ಉಪರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಿರುವ ಮೂವರೂ ಮುಸ್ಲಿಂರೇ ಆಗಿರುವುದು ಒಂದು ವಿಶೇಷ.

ಈವರೆಗೆ ಉಪರಾಷ್ಟ್ರಪತಿಯಾಗಿದ್ದ ಭೈರೋನ್ ಸಿಂಗ್ ಶೇಖಾವತ್ ಅವರ ಅಧಿಕಾರವಧಿ ಮುಕ್ತಾಯವಾಗಿದ್ದು, ಅವರ ಸ್ಥಾನಕ್ಕೆ ಚುನಾವಣೆ ನಡೆದಿದೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X