ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾರ್ಚ್ 17ರಿಂದ 27ರ ವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ

By Staff
|
Google Oneindia Kannada News

ಬೆಂಗಳೂರು, ಆಗಸ್ಟ್ 10 : ಏಪ್ರಿಲ್ ತಿಂಗಳಲ್ಲಿ ಸಾಮಾನ್ಯವಾಗಿ ಪಿಯುಸಿ ಪರೀಕ್ಷೆಗಳು ನಡೆಯುವುದು ವಾಡಿಕೆ. ಆದರೆ ಇನ್ನುಮುಂದೆ ಮಾರ್ಚು ತಿಂಗಳಲ್ಲೇ ಪರೀಕ್ಷೆ ನಡೆಯಲಿದೆ ಎಂದು ಶಿಕ್ಷಣ ಇಲಾಖೆ ಹೇಳಿದೆ.

ಈ ಬದಲಾವಣೆಗೆ ಒಂದು ಕಾರಣವಿದೆ. ಐಐಟಿ ಮತ್ತು ಎಐಇಇಇ ಪರೀಕ್ಷೆಗಳು ಏಪ್ರಿಲ್ ನಲ್ಲಿ ನಡೆಯುತ್ತವೆ. ಈ ಪರೀಕ್ಷೆಯಲ್ಲಿ ರಾಜ್ಯದ ವಿದ್ಯಾರ್ಥಿಗಳ ಸಾಧನೆ ಕಳಪೆಯಾಗಿದೆ. ಮಾರ್ಚ್ ನಲ್ಲಿಯೇ ಪಿಯುಸಿ ಪರೀಕ್ಷೆ ಮುಗಿಯುವುದರಿಂದ, ರಾಷ್ಟ್ರಮಟ್ಟದ ಪರೀಕ್ಷೆ ಎದುರಿಸಲು ಸುಲಭವಾಗಬಹುದು ಎಂಬುದು ಶಿಕ್ಷಣ ಇಲಾಖೆಯ ಲೆಕ್ಕಾಚಾರ.

ಪ್ರಸಕ್ತ ಸಾಲಿನ ಪರೀಕ್ಷೆ ಮಾರ್ಚ್ 17ರಿಂದ 27ರವರೆಗೆ ನಡೆಯಲಿದೆ. ಇದು ತಾತ್ಕಾಲಿಕ ವೇಳಾಪಟ್ಟಿ, ಮುಂದಿನ ದಿನಗಳಲ್ಲಿ ಬದಲಾದರೂ ಆಗಬಹುದು. ಅಲ್ಲದೇ ದಸರೆ ರಜೆ ಕಡಿತವಾಗುವ ಸಾಧ್ಯತೆಗಳಿವೆ ಎಂದು ಇಲಾಖೆ ತಿಳಿಸಿದೆ.

ಎಲ್ಲವೂ ಅಂದುಕೊಂಡಂತೆ ಆದರೆ, ಎಸ್ಎಸ್ಎಲ್ ಸಿ ಪರೀಕ್ಷೆಗೂ ಮುನ್ನವೇ ಪಿಯುಸಿ ಪರೀಕ್ಷೆ ಮುಗಿಯಲಿವೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X