ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಲುಗೆ ಹೇಮಾಮಾಲಿನಿ ಸಿನಿಮಾದಲ್ಲಿ ನಟಿಸುವ ಹಂಬಲ!

By Staff
|
Google Oneindia Kannada News

ನವದೆಹಲಿ, ಆಗಸ್ಟ್ 10 : ನಟಿ ಹೇಮಾಮಾಲಿನಿ ಅವರ ನುಣುಪು ಕೆನ್ನೆಯಂತೆ ಬಿಹಾರದ ರಸ್ತೆಗಳನ್ನು ಪರಿವರ್ತಿಸುವುದಾಗಿ, ಜನತೆಗೆ ಹಿಂದೊಮ್ಮೆ ಭರವಸೆ ನೀಡಿದ್ದ ಆರ್ ಜೆಡಿ ಮುಖಂಡ ಮತ್ತು ಕೇಂದ್ರ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಈಗ ಇನ್ನೊಂದು ಆಸೆಯನ್ನು ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಉಪರಾಷ್ಟ್ರವತಿ ಚುನಾವಣೆಯಲ್ಲಿ ಮತಚಲಾಯಿಸಿದ ಅವರು, ನಂತರ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದರು. ಹೇಮಾಮಾಲಿನಿ ಹೊಸ ಚಿತ್ರ ನಿರ್ಮಾಣ ಮಾಡಲಿದ್ದು, ಆ ಚಿತ್ರದಲ್ಲಿ ಅಭಿನಯಿಸುವ ಹಂಬಲ ನನ್ನಲ್ಲಿದೆ. ನನಗೆ ಅವಕಾಶ ನೀಡುವಂತೆ ಕೇಳಿದ್ದೇನೆ. ನೋಡೋಣ ಎಂದು ಲಾಲು ಹೇಳಿದರು.

ಗಲಿಬಿಲಿಗೊಂಡ ಸುದ್ದಿಗಾರರು, ಇದೇನು ನಗೆಚಟಾಕಿಯೋ ಅಥವಾ ನಿಜವೋ ಎಂದು ಪ್ರಶ್ನಿಸಿದರು. ಲಾಲು ನಿಜವೆಂದು ಒತ್ತಿ ಹೇಳಿದರು.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X