ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೈದರಾಬಾದ್ :ತಸ್ಲಿಮಾ ಮೇಲೆ ಮುಸ್ಲಿಂ ಸಂಘಟನೆ ದಾಳಿ

By Staff
|
Google Oneindia Kannada News

Taslima Nasreen attacked in Hyderabadಹೈದರಾಬಾದ್, ಆಗಸ್ಟ್ 09 : ಅನೇಕ ವಿವಾದಗಳಿಗೆ ಕಾರಣವಾಗಿರುವ ಬಾಂಗ್ಲಾದೇಶದ ಕಾದಂಬರಿಗಾರ್ತಿ ತಸ್ಲಿಮಾ ನಸ್ರೀನ್ ಮೇಲೆ, ಮುಸ್ಲಿಂ ಸಂಘಟನೆಯೊಂದು ಗುರುವಾರ ದಾಳಿ ಮಾಡಿದೆ.

ನಗರದ ಸೋಮಾಜಿ ಗುಡ್ಡದಲ್ಲಿರುವ ಹೈದರಾಬಾದ್ ಪ್ರೆಸ್ ಕ್ಲಬ್ ನಲ್ಲಿ ಪುಸ್ತಕ ಬಿಡುಗಡೆ(ನಸ್ರೀನ್ ಪುಸ್ತಕದ ತೆಲುಗು ಅನುವಾದ) ಕಾರ್ಯಕ್ರಮವೊಂದು ಏರ್ಪಾಡಾಗಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಸ್ರೀನ್ ಮೇಲೆ ಮುಸ್ಲಿಂ ಸಂಘಟನೆಯ ಸದಸ್ಯರು ದಾಳಿ ಮಾಡಿದರು.

ಶಾಸಕ ಮಹಮದ್ ಮುಕ್ತಾದ್ ಖಾನ್, ಮಹಮದ್ ಮಹಜಮ್ ಖಾನ್ ಮತ್ತು ಸೈಯದ್ ಅಹಮದ್ ಪಾಷಾ ನೇತೃತ್ವದಲ್ಲಿ ದಾಳಿ ನಡೆಯಿತು. ಘಟನೆಗೆ ಸಂಬಂಧಿಸಿದಂತೆ ಈ ಮೂವರು ಶಾಸಕರನ್ನು ಪೊಲೀಸರು ಬಂಧಿಸಿದ್ದಾರೆ.

ವೇದಿಕೆ ಮೇಲಿದ್ದ ಆಸನಗಳನ್ನು ಚೆಲ್ಲಾಪಿಲ್ಲಿ ಮಾಡಿ, ನಸ್ರೀನ್ ವಿರುದ್ಧ ಘೋಷಣೆ ಕೂಗಿದರು. ಪತ್ರಕರ್ತರು, ಛಾಯಾಗ್ರಾಹಕರ ನೆರವಿಗೆ ಬಂದ ಕಾರಣ, ನಸ್ರೀನ್ ಅವರಿಗೆ ಹೆಚ್ಚಿನ ತೊಂದರೆ ತಪ್ಪಿತು ಎನ್ನಲಾಗಿದೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X