ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಎಂಟಿಸಿ ಪಾಸ್ ದರ ಹೆಚ್ಚಳ: ಜೇಬಿಗೆ ಕೈಹಾಕಲು ಸ್ಪರ್ಧೆ!

By Staff
|
Google Oneindia Kannada News

ಬೆಂಗಳೂರು, ಆಗಸ್ಟ್ 09 : ಪ್ರಯಾಣಿಕರ ಜೇಬಿಗೆ ಕೈ ಹಾಕಲು ಬಿಎಂಟಿಸಿ ಮತ್ತು ಕೆಎಸ್ಆರ್ ಟಿಸಿಗೆ ಎಲ್ಲಿಲ್ಲದ ಉತ್ಸಾಹ. ಸದಾ ಪೈಪೋಟಿ. ಈಗ ಬಿಎಂಟಿಸಿ, ಪಾಸುದಾರರ ಜೇಬಿಗೆ ಕೈಹಾಕಿ ಐದು ರೂ. ಕಸಿದಿದೆ!

ಹೌದು. ಗುರುವಾರದಿಂದ ಬಿಎಂಟಿಸಿ ದಿನದ ಪಾಸಿನ ದರ 25ರಿಂದ 30ರೂಪಾಯಿಗೆ ಏರಿಕೆಯಾಗಿದೆ. ಪ್ರತಿನಿತ್ಯ ಎರಡು ಲಕ್ಷಕ್ಕೂ ಅಧಿಕ ಮಂದಿ, ದಿನದ ಪಾಸ್ ಪಡೆದು ರಾಜಧಾನಿಯಲ್ಲಿ ಸುತ್ತಾಡುತ್ತಾರೆ.

ಸಿಬ್ಬಂದಿ ವೇತನ ಹೆಚ್ಚಳ, ಸಂಸ್ಥೆಯ ನಿರ್ವಹಣೆಗಾಗಿ ದರ ಹೆಚ್ಚಳ ಅನಿವಾರ್ಯವಾಗಿದೆ. ಕಳೆದ 3ವರ್ಷಗಳಿಂದ ಪಾಸ್ ದರ ಹೆಚ್ಚಿಸಿಲ್ಲ ಎಂದು ಬಿಎಂಟಿಸಿ ಹೇಳಿದೆ. ಮೊನ್ನೆಯಷ್ಟೇ ಮಾಸಿಕ ಪಾಸ್ ದರದಲ್ಲಿ 25ರೂಪಾಯಿ ಹೆಚ್ಚಳವಾಗಿದೆ(ಕೆಂಪು ಹಲಗೆ ಮಾಸಿಕ ಬಸ್ ದರ ಈಗ ರೂ.525).

ಕೆಎಸ್ಆರ್ ಟಿಸಿ ಮತ್ತು ಬಿಎಂಟಿಸಿ ಸದ್ಯಕ್ಕೆ ಗಣನೀಯ ಲಾಭದಲ್ಲಿವೆ. ಆದರೂ ಪ್ರಯಾಣಿಕರ ಜೇಬಿಗೆ ಕೈ ಹಾಕುವ ಚಾಳಿ ನಿಲ್ಲಿಸಿಲ್ಲ ಎಂದು ಪ್ರಯಾಣಿಕರು ದೂರಿದ್ದಾರೆ. ಇತ್ತೀಚೆಗಷ್ಟೇ ಶೇ.10ರಷ್ಟು ಪ್ರಯಾಣ ದರಗಳನ್ನು ಕೆಎಸ್ಆರ್ ಟಿಸಿ ಹೆಚ್ಚಳ ಮಾಡಿದ ಅಂಶ ಇಲ್ಲಿ ಉಲ್ಲೇಖನೀಯ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X