• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಬ್ಬಾ ಹೆಂಗಸೇ! ಖಾಸಗಿ ಬ್ಯಾಂಕ್‌ಗಳಿಗೆ ಭರ್ತಿ 64 ಲಕ್ಷ ಟೋಪಿ!

By Staff
|

Hi-tech cheat dupes MNC banks to the tune of Rs 64 lakhsಬೆಂಗಳೂರು, ಆಗಸ್ಟ್ 07 : ಬಹುರಾಷ್ಟ್ರೀಯ ಬ್ಯಾಂಕ್‌ಗಳಿಗೆ ಭರ್ತಿ 64 ಲಕ್ಷ ಟೋಪಿ ಇಟ್ಟ 27ರ ಹರೆಯದ ಪೇಯಿಂಗ್ ಗೆಸ್ಟ್ ಒಡತಿ ಈಗ ಪೊಲೀಸರ ವಿಶೇಷ ಗೆಸ್ಟ್ ಆಗಿದ್ದಾಳೆ.

ಪೇಯಿಂಗ್ ಗೆಸ್ಟ್ ಆಗಿದ್ದ ಹುಡುಗಿಯರ ಛಾಯಾಚಿತ್ರ ಬಳಸಿ ಮೂಲ ಡ್ರೈವಿಂಗ್ ಲೈಸೆನ್ಸ್, ಪ್ಯಾನ್ ಕಾರ್ಡ್, ವಿಸಿಟಿಂಗ್ ಕಾರ್ಡ್‌ಗಳನ್ನು ಸೃಷ್ಟಿಸಿ ಬ್ಯಾಂಕ್ ಖಾತೆ ತೆರೆದು ಐಸಿಐಸಿಐ, ಎಚ್‌ಡಿಎಫ್‌ಸಿಯಂಥ ಬ್ಯಾಂಕ್‌ಗಳಿಗೆ ಟೋಪಿ ಇಟ್ಟಂಥ ಪರಿ ಒಂದು ಚಿತ್ರ ತೆರೆಯಲು ಒಳ್ಳೆಯ ಸಾಮಗ್ರಿ.

ಆರ್ಟಿಓ ಆಫೀಸಿಗೆ, ತೆರಿಗೆ ಇಲಾಖೆಗೆ, ಕೊನೆಗೆ ಬ್ಯಾಂಕ್‌ಗೆ ಚಳ್ಳೆಹಣ್ಣು ತಿನ್ನಿಸಿದ ಹೇಮಲತಾ ಎಂಬ ಮಹಿಳೆಯ ಕಾರ್ಯತಂತ್ರ ಹೇಗಿದೆಯೋ ನೋಡಿ!

ತನ್ನ ಮನೆಗೆ ಪೇಯಿಂಗ್ ಗೆಸ್ಟ್ ಆಗಿ ಬರುತ್ತಿದ್ದ ಹುಡುಗಿಯ ಫೋಟೋ ಇಸಿದುಕೊಳ್ಳುವುದು ಈಕೆ ಹೆಣೆದ ಮೊದಲ ತಂತ್ರ. ನಂತರ ಕಂಪ್ಯೂಟರ್ ಬಳಸಿ ವಿಪ್ರೋ ಕಂಪನಿಯ ನಕಲಿ ಅಪಾಯಿಂಟ್‌ಮೆಂಟ್ ಪತ್ರಗಳನ್ನು ಮನೆ ತ್ಯಜಿಸಿದ ಹುಡುಗಿಯರ ಹೆಸರಲ್ಲಿ ಸೃಷ್ಟಿಸುತ್ತಿದ್ದಳು. ಅವನ್ನು ಬಳಸಿ ಡ್ರೈವಿಂಗ್ ಲೈಸೆನ್ಸ್, ಪ್ಯಾನ್ ಕಾರ್ಡ್ ಪಡೆದುಕೊಳ್ಳುತ್ತಿದ್ದಳು.

ಇದು ಮೊದಲ ಹಂತ. ಎರಡನೇ ಹಂತದಲ್ಲಿ ಮನೆಗೇ ಬಂದು ದಾಖಲೆಗಳನ್ನು ಇಸಿದುಕೊಂಡು ಹೋಗುವ ಬಹುರಾಷ್ಟ್ರೀಯ ಕಂಪನಿಗಳು ನಿಯಮಿಸಿರುವ ಹೊರಗುತ್ತಿಗೆ ಸಂಸ್ಥೆಗಳ ಎಕ್ಸಿಕ್ಯುಟೀವ್‌ಗಳನ್ನು ನಂಬಿಸಿ ಹುಡುಗಿಯರ ಹೆಸರಲ್ಲಿ ಐಸಿಐಸಿಐ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ಗಳಲ್ಲಿ ಖಾತೆ ತೆರೆಯುತ್ತಿದ್ದಳು. ಯದ್ವಾತದ್ವಾ ವೈಯಕ್ತಿಕ ಸಾಲಗಳನ್ನು ಮಾಡಿ ಮೊದಲ ಮೂರು ಕಂತುಗಳನ್ನು ಮಾತ್ರ ಕಟ್ಟಿ ನಂತರ ಬ್ಯಾಂಕ್‌ಗಳಿಗೆ ತಿಪ್ಪೆ ಸಾರಿಬಿಡುವುದು ಹೇಮಲತಾ ನಡೆಸಿಕೊಂಡು ಬರುತ್ತಿದ್ದ ತಂತ್ರ.

ಗಡ್ಡಕ್ಕೆ ಬೆಂಕಿ ಹತ್ತಿಕೊಂಡಾಗ ಬ್ಯಾಂಕುಗಳು ಎಚ್ಚೆತ್ತುಕೊಂಡಿವೆ. ಹಣ ಸರಿಯಾಗಿ ಸಂದಾಯವಾಗುತ್ತಿಲ್ಲ ಎಂಬುದನ್ನು ಮನಗಂಡ ಬ್ಯಾಂಕುಗಳು ಈ ಹುಡುಗಿಯರ ಜಾಡು ಹುಡುಕಲು ಪ್ರಾರಂಭಿಸಿವೆ. ಆವಾಗಲೇ ಗೊತ್ತಾಗಿದ್ದು ಹೇಮಲತಾಳ ಕರ್ಮಕಾಂಡ. ಅಷ್ಟೊತ್ತಿಗಾಗಲೇ ಹೇಮಲತಾ ಇನ್ನೊಬ್ಬ ಸುರೇಶ್ ಎಂಬುವನ ಸಹಾಯದೊಂದಿಗೆ 64 ಲಕ್ಷ ರುಪಾಯಿಗಳಷ್ಟು ನಾಮ ಇಟ್ಟಾಗಿತ್ತು. ಹೊರಗುತ್ತಿಗೆ ಸಂಸ್ಥೆಗಳ ದೌರ್ಬಲ್ಯಗಳನ್ನು ಲಾಭದಾಯಕವಾಗಿ ಬಳಸಿಕೊಂಡ ಇವರಿಬ್ಬರು ಲಕ್ಷಗಟ್ಟಲೆ ದುಡ್ಡನ್ನು ನುಂಗಿಹಾಕಿದ್ದಾರೆ.

ತಲೆಮರೆಸಿಕೊಂಡಿರುವ ಸುರೇಶನನ್ನು ಪೊಲೀಸರು ಹುಡುಕುತ್ತಿರುವುದಾಗಿ ಉಪ ಪೊಲೀಸ್ ಆಯುಕ್ತ ಬಿ.ಎನ್.ಎಸ್. ರೆಡ್ಡಿ ಹೇಳಿದ್ದಾರೆ.

ಹೇಮಲತಾ ಇನ್ನೂ ಎಷ್ಟು ಬ್ಯಾಂಕ್‌ಗಳಿಗೆ ಮೋಸ ಮಾಡಿದ್ದಾಳೆ ಎಂಬುದು ಪೂರ್ತಿಯಾಗಿ ತಿಳಿದುಬಂದಿಲ್ಲ. ಅವಳಿಂದ ಕಂಪ್ಯೂಟರ್, ಪ್ರಿಂಟರ್, ಸ್ಕ್ಯಾನರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಹೇಮಲತಾಳನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

ಕಂಡವರಿಗೆಲ್ಲ ಕೇಳಿದಾಗಲೆಲ್ಲ ದಾಖಲೆಗಳನ್ನು ಸರಿಯಾಗಿ ಪರಿಶೀಲನೆ ಮಾಡದೆ ಬೇಕಾಬಿಟ್ಟಿ ಸಾಲಗಳನ್ನು ನೀಡುವ ಬ್ಯಾಂಕುಗಳು ಇನ್ನಾದರೂ ಎಚ್ಚೆತ್ತುಕೊಳ್ಳುತ್ತವೆಯೋ ನೋಡಬೇಕು.

(ಯುಎನ್ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X