ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಪ್ರೋ ಸಂಸ್ಥೆ ಮಡಿಲಿಗೆ ಅಮೆರಿಕಾದ ಪ್ರಮುಖ ಐಟಿ ಕಂಪನಿ

By Staff
|
Google Oneindia Kannada News

ಬೆಂಗಳೂರು, ಆಗಸ್ಟ್ 07 : ಮಹತ್ವದ ಬೆಳವಣಿಗೆಯೊಂದರಲ್ಲಿ ಮಾಹಿತಿ ತಂತ್ರಜ್ಞಾನ ದಿಗ್ಗಜ ವಿಪ್ರೋಸಂಸ್ಥೆ, ಅಮೆರಿಕಾ ಮೂಲಕ ಇನ್ಫೋ‌ಕ್ರಾಸಿಂಗ್ ಸಂಸ್ಥೆಯನ್ನು ತನ್ನದಾಗಿಸಿಕೊಂಡಿದೆ.

ನಾಸ್ಡಾಕ್‌ನಲ್ಲಿ ಸ್ಥಾನಪಡೆದಿರುವ ಈ ಮಾಹಿತಿ ತಂತ್ರಜ್ಞಾನ ಮೂಲಸೌಕರ್ಯ ನಿರ್ವಹಣಾ ಸಂಸ್ಥೆಯನ್ನು ,ವಿಪ್ರೋ 600 ಮಿಲಿಯನ್ ಡಾಲರುಗಳನ್ನು ತೆತ್ತು ಕೊಂಡುಕೊಂಡಿದೆ.

ವಿಪ್ರೋ ಮುಖ್ಯ ಹಣಕಾಸು ಅಧಿಕಾರಿ ಸುರೇಶ್ ಸೇನಾಪತಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಈ ಸಂಬಂಧ ಎರಡೂ ಕಂಪನಿಗಳು ಒಪ್ಪಂದಕ್ಕೆ ಸಹಿಹಾಕಿವೆ. ಈ ವ್ಯವಹಾರ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ನಾಯಕತ್ವವೊಂದಕ್ಕೆ ಮುನ್ನುಡಿ ಬರೆದಿದೆ ಎಂದು ಅಭಿಪ್ರಾಯಪಟ್ಟರು.

ಇನ್ಫೋ‌ಕ್ರಾಸಿಂಗ್ ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ ಒಟ್ಟು ಐದು ಶಾಖೆಗಳನ್ನು ಹೊಂದಿದ್ದು, 32ಮಿಲಿಯನ್ ಷೇರುಗಳನ್ನು ಹೊಂದಿದೆ. ಅಮೆರಿಕಾದಲ್ಲಿರುವ ವಿಪ್ರೋ ಇನ್‌ಕಾರ್ಪೊರೇಷನ್‌ನಲ್ಲಿ ಇನ್ಫೋ‌ಕ್ರಾಸಿಂಗ್ ವಿಲೀನಗೊಳ್ಳಲಿದೆ ಎಂದು ಅವರು ವಿವರಿಸಿದರು.

(ಯುಎನ್ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X