ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಲ್ ಬಾಗ್ ಸುಮರಾಣಿಯರ ಮಧ್ಯೆ ಕೆಂಪು ತಾಜ್ ಮಹಲ್!

By Staff
|
Google Oneindia Kannada News

ಬೆಂಗಳೂರು, ಆಗಸ್ಟ್ 07 : ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ, ಸಸ್ಯಕಾಶಿ ಲಾಲ್ ಬಾಗ್ ನಲ್ಲಿ ಕಣ್ಮನ ಸೂರೆಗೊಳ್ಳುವ ಫಲಪುಷ್ಪ ಪ್ರದರ್ಶನ ನಡೆಯಲಿದೆ.

ವಿಶ್ವದ ಏಳು ಅದ್ಭುತಗಳ ಪಟ್ಟಿಗೆ ಸೇರಿದ ತಾಜ್ ಮಹಲ್, ಈ ವರ್ಷದ ವಿಶೇಷ. ಫಲಪುಷ್ಪ ಪ್ರದರ್ಶನದಲ್ಲಿ ಸುಮಾರು 15x18 ಅಡಿಯ ಗುಲಾಬಿ ತಾಜ್ ಮಹಲ್ ತಲೆ ಎತ್ತಲಿದೆ. ಈ ತಾಜ್ ಮಹಲ್ 26ಸಾವಿರ ಗುಲಾಬಿ ಹೂವುಗಳಿಂದ ಮಾಡಲ್ಪಟ್ಟಿದೆ ಎಂದು ತೋಟಗಾರಿಕೆ ಹೆಚ್ಚುವರಿ ನಿರ್ದೇಶಕ ಡಾ.ಕೆ.ರಾಮಕೃಷ್ಣಪ್ಪ ಸುದ್ದಿಗಾರರಿಗೆ ತಿಳಿಸಿದ್ದಾರೆ.

ರೇಡಿಯೋ ಮಿರ್ಚಿ ಮತ್ತು ಕಸ್ತೂರಿ ಫ್ಲಾರಿಟೆಕ್ ಈ ತಾಜ್ ಮಹಲ್ ಪ್ರಾಯೋಜಿಸಿವೆ. ಲಾಲ್ ಬಾಗ್ ನಲ್ಲಿ ನಡೆಯುತ್ತಿರುವ 114ನೇ ಫಲಪುಷ್ಪ ಪ್ರದರ್ಶನದ ಒಟ್ಟು ಖರ್ಚು 32ಲಕ್ಷ. ಆ.9ರಿಂದ ಸಾರ್ವಜನಿಕರಿಗೆ ಪ್ರವೇಶ ಕಲ್ಪಿಸಲಾಗಿದೆ.

  • ಫಲಪುಷ್ಪ ಪ್ರದರ್ಶನದಲ್ಲಿ ಜನಪದ ಹಾಡು ಮತ್ತು ಗೀತ ನೃತ್ಯಗಳ ರಸದೌತಣ
  • ಆಗಸ್ಟ್ 8ರಿಂದ 15ರವರೆಗೆ ಪ್ರದರ್ಶನ ವೀಕ್ಷಣೆಗೆ ಅವಕಾಶ
  • ಆಗಸ್ಟ್ 14ರಂದು ಶಾಲಾ ಮಕ್ಕಳಿಗೆ ಉಚಿತ ಪ್ರವೇಶ.
  • ದೊಡ್ಡವರಿಗೆ 20ರೂಪಾಯಿ, ಮಕ್ಕಳಿಗೆ 10ರೂಪಾಯಿ ಪ್ರವೇಶ ಶುಲ್ಕ
(ದಟ್ಸ್ ಕನ್ನಡ ವಾರ್ತೆ)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X