ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಂಚನೆಯ ಜಾಲ ಬೀಸಿದ್ದ ಪ್ರಿನ್ಸಿಪಾಲ್ ಪೊಲೀಸ್ ಬಲೆಯಲ್ಲಿ

By Staff
|
Google Oneindia Kannada News

ಮಂಗಳೂರು, ಆಗಸ್ಟ್ 06 : ನರ್ಸಿಂಗ್ ಕಾಲೇಜಿನಲ್ಲಿ ಸರ್ಕಾರಿ ಕೋಟಾದಡಿ ಸೀಟಿನ ಆಸೆ ತೋರಿಸಿ ವಂಚನೆ ಜಾಲ ಬೀಸಿದ್ದ ಮಾಜಿ ಪ್ರಾಂಶುಪಾಲ ಮತ್ತೊಬ್ಬನನ್ನು ಭಾನುವಾರ ಇಲ್ಲಿ ಬಂಧಿಸಲಾಗಿದೆ.

ವೆನ್ಲಾಕ್ ನರ್ಸಿಂಗ್ ಕಾಲೇಜಿನ ಮಾಜಿ ಪ್ರಾಂಶುಪಾಲನಾದ ತುಳಸಿದಾಸ್ ಮತ್ತು ಈ ವಂಚನೆಯಲ್ಲಿ ಭಾಗಿಯಾದ ಆತನ ಸಹಚರ ತೇಜಸ್ ಅವರನ್ನು ನಕಲಿ ದಾಖಲೆ, ಪತ್ರಗಳು ಮತ್ತು ಸೀಲ್‌ನೊಂದಿಗೆ ಪೊಲೀಸರು ಬಂಧಿಸಿದ್ದಾರೆ.

ಸರ್ಕಾರಿ ಕೋಟಾದಡಿ ವೆನ್ಲಾಕ್ ಕಾಲೇಜಿನಲ್ಲಿ ಸೀಟನ್ನು ಕಾಯ್ದಿರಿಸಲು ಆಗಸ್ಟ್ 5ರಂದು ಸಂದರ್ಶನಕ್ಕೆ ಬರಬೇಕೆಂದು ಪ್ರಿನ್ಸ್ ಗೈಡನ್ಸ್ ಕಾಲೇಜ್, ಚಿಕ್ಕಮಗಳೂರಿನ ನೈಟಿಂಗೇಲ್ ನರ್ಸಿಂಗ್ ಕಾಲೇಜಿನ ಸುಮಾರು 800 ವಿದ್ಯಾರ್ಥಿಗಳಿಗೆ ಈ ನಕಲಿ ಸಂದರ್ಶಕರ ತಂಡ ಕರೆಕಳಿಸಿತ್ತು.

ಅವರಲ್ಲಿ ಸುಮಾರು 150 ವಿದ್ಯಾರ್ಥಿನಿಯರು ಹೊರಗಡೆಯಿಂದ ಬಂದಿದ್ದರು. ಡೊನೇಷನ್ ಸೇರಿ ಮೂರು ವರ್ಷಕ್ಕೆ ಒಟ್ಟು ಒಂದೂವರೆ ಲಕ್ಷ ಹಣ ಆಗುತ್ತದೆ. ಸಂದರ್ಶನದ ವೇಳೆ ಮುಂಗಡವಾಗಿ ಐದು ಸಾವಿರ ರುಪಾಯಿ ನೀಡಬೇಕೆಂದು ತಿಳಿಸಿದ್ದರು.

ವಂಚನೆಯ ವಾಸನೆ ಬಡಿದ ವಿದ್ಯಾರ್ಥಿನಿಯರು ಸಂದರ್ಶಕರೊಂದಿಗೆ ವಾಗ್ವಾದಕ್ಕಿಳಿದರು. ಬಣ್ಣ ಬಯಲಾಗುತ್ತಿದ್ದಂತೆ ತುಳಸಿದಾಸ್ ಜೊತೆಗಿದ್ದ ಮೂವರು ಪರಾರಿಯಾದರು. ವಿದ್ಯಾರ್ಥಿನಿಯರು ನೀಡಿದ ದೂರಿನನ್ವಯ ತುಳಸಿದಾಸ್ ಮತ್ತು ಆತನ ಸಹಚರನನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆಯ ವೇಳೆ ವಂಚನೆಯ ಸಂಚನ್ನು ಒಪ್ಪಿಕೊಂಡಿದ್ದಾರೆ.

ಇದೇ ಸಮಯದಲ್ಲಿ, ಸರ್ಕಾರಿ ವೆನ್ಲಾಕ್ ಆಸ್ಪತ್ರೆಯ ಮೇಲ್ವಿಚಾರಕ ತುಳಸಿದಾಸ್ ಕರೆದಿದ್ದ ಸಂದರ್ಶನಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

(ಯುಎನ್ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X