ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಗತ್ತಿನ ಅತ್ಯುತ್ತಮ ರಕ್ಷಣಾಸಂಸ್ಥೆ ಪಟ್ಟಿಯಲ್ಲಿ ಎಚ್ಎಎಲ್‌

By Staff
|
Google Oneindia Kannada News

ಬೆಂಗಳೂರು, ಆಗಸ್ಟ್ 06 : ಜಗತ್ತಿನ ಅತ್ಯುತ್ತಮ 100 ರಕ್ಷಣಾ ಸಂಸ್ಥೆಗಳಲ್ಲಿ ಬೆಂಗಳೂರಿನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(ಎಚ್ಎಎಲ್) 34ನೇ ಸ್ಥಾನ ಪಡೆದಿದೆ.

ಸಂಸ್ಥೆಯ ಉತ್ಪನ್ನಗಳ ಮಾರಾಟ ಮತ್ತು ಲಾಭವನ್ನು ಆಧರಿಸಿ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ಪಟ್ಟಿಯನ್ನು ಪ್ರಕಟಿಸಿರುವ ಅಮೆರಿಕೆಯ ಪತ್ರಿಕೆಯ ಪ್ರಕಾರ ಕಳೆದ ವರ್ಷ 45ನೇ ಸ್ಥಾನದಲ್ಲಿದ್ದ ಎಚ್ಎಎಲ್ ಈ ವರ್ಷ 34ನೇ ಸ್ಥಾನಕ್ಕೇರಿದೆ.

ಸುಧಾರಣಾ ಕಾರ್ಯಕ್ರಮಗಳು, ಹೊಸ ಯೋಜನೆಗಳು ಸಂಸ್ಥೆಯ ಯಶಸ್ಸಿಗೆ ಕಾರಣ ಎಂದು ಎಚ್ಎಎಲ್ ತಿಳಿಸಿದೆ.

ಮುಂದಿನ ವರ್ಷ ಮೊದಲ 25 ಸಂಸ್ಥೆಗಳಲ್ಲಿ ಸ್ಥಾನಪಡೆಯಲು ಪ್ರಯತ್ನಿಸುವುದಾಗಿ ಎಚ್ಎಎಲ್ ಅಧ್ಯಕ್ಷ ಅಶೋಕ ಕೆ. ಬವೇಜಾ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ ಎಚ್ಎಎಲ್ ಒಟ್ಟು 7784 ಕೋಟಿ ರು. ವಹಿವಾಟು ಮಾಡಿದ್ದು, ಶೇ.46ರಷ್ಟು ಅಭಿವೃದ್ಧಿ ಸಾಧಿಸಿದೆ. ಕಳೆದ ವರ್ಷಕ್ಕಿಂತ ಶೇ.55ರಷ್ಟು ಜಾಸ್ತಿ ಅಂದರೆ ಒಟ್ಟು 1744 ಕೋಟಿ ರು. ಲಾಭ ಗಳಿಸಿದೆ.

(ಯುಎನ್ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X