ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಲ್ಲಿ ಏಷ್ಯಾದ ಎರಡನೇ ಬೃಹತ್ ಪುಸ್ತಕೋತ್ಸವ!

By Staff
|
Google Oneindia Kannada News

ಬೆಂಗಳೂರು, ಆಗಸ್ಟ್ 01 : ಈ ಸಲದ ಬೆಂಗಳೂರು ಪುಸ್ತಕೋತ್ಸವ, ಏಷ್ಯಾದಲ್ಲೇ ಎರಡನೇ ದೊಡ್ಡ ಪುಸ್ತಕೋತ್ಸವ ಎಂಬ ಖ್ಯಾತಿಗೆ ಪಾತ್ರವಾಗಲಿದೆ ಎನ್ನಲಾಗಿದೆ.

ಸೆಪ್ಟೆಂಬರ್ 21ರಿಂದ ಆರಂಭವಾಗುವ 4ನೇ ಬೆಂಗಳೂರು ಪುಸ್ತಕೋತ್ಸವದಲ್ಲಿ ಸುಮಾರು 10ಲಕ್ಷ ಪುಸ್ತಕಗಳ ಪ್ರದರ್ಶನ-ಮಾರಾಟ ನಡೆಯಲಿದೆ.

ಉತ್ಸವದ ಜಂಟಿ ಆಯೋಜಕ ಬಿ.ಎಸ್.ರಘುರಾಮ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ,ಬೆಂಗಳೂರು ಪುಸ್ತಕ ಮಾರಾಟಗಾರರು ಹಾಗೂ ಪ್ರಕಾಶಕರ ಸಂಘ ಜನರಲ್ಲಿ ಓದುವ ಅಭಿರುಚಿ ಬೆಳೆಸುವ ನಿಟ್ಟಿನಲ್ಲಿ ಯಶಸ್ವಿಯಾಗಿ ಮುನ್ನಡೆದಿದೆ ಎಂದು ತಿಳಿಸಿದರು.

10ದಿನಗಳ ಕಾಲ ನಡೆಯುವ ಮೇಳದಲ್ಲಿ ಕನ್ನಡ ಪುಸ್ತಕಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಇದಲ್ಲದೆ, ವಿವಿಧ ಭಾರತೀಯ ಭಾಷಾ ಪುಸ್ತಕಗಳು ಹಾಗೂ ಇಂಗ್ಲಿಷ್ ಸೇರಿದಂತೆವಿವಿಧ ವಿದೇಶಿ ಭಾಷಾ ಪುಸ್ತಕಗಳೂ ಲಭ್ಯ ಎಂದು ಅವರು ವಿವರಿಸಿದರು.

ಮೇಳ ನೋಡಲು ಬರುವವರಿಗೆ ಪುಸ್ತಕದ ಟೋಕನ್‌ಗಳನ್ನು ವಿತರಿಸಲಾಗುವುದು. ಒಂದು ಟೋಕನ್‌ನಲ್ಲಿ ಇಬ್ಬರಿಗೆ ಪ್ರವೇಶವಿದ್ದು, ಪುಸ್ತಕ ಕೊಂಡರೆ ಶೇಕಡಾ 10ರಷ್ಟು ರಿಯಾಯ್ತಿ ಸಹ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.

(ಯುಎನ್ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X