ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉದ್ಯಾನನಗರಿಯ ಗಲ್ಲಿಗಲ್ಲಿಗಳಲ್ಲಿ ಮಸಣದ ಹೂವುಗಳು!?

By Staff
|
Google Oneindia Kannada News

ಬೆಂಗಳೂರು, ಆಗಸ್ಟ್ 01 : ನಗರದಲ್ಲಿ ಮಾಂಸದ ವ್ಯಾಪಾರ ಅರ್ಥಾತ್ ವೇಶ್ಯಾವಾಟಿಕೆ ಹೆಚ್ಚುತ್ತಿದೆ. ಕದ್ದುಮುಚ್ಚಿ ಅಲ್ಲ, ಬೀದಿ ಬದಿಯಲ್ಲಿ ಸೆರಗು ಹಾಸಿ ನಿಂತಿರುವ ವೇಶ್ಯೆಯರ ದೃಶ್ಯ ರಾಜಧಾನಿಯಲ್ಲಿ ಇಂದು ಸರ್ವೇ ಸಾಮಾನ್ಯ.

ಯಾವುದೇ ಫ್ಲೈ ಓವರ್ ಕೆಳಗೆ, ಪಾರ್ಕಿನ ಪೊದೆಯ ಮಧ್ಯೆ, ಯಾವುದೋ ಲಾಡ್ಜ್ , ಹೀಗೆ ವೇಶ್ಯಾವಾಟಿಕೆ ಸದಾ ನಿರಂತರ. ಮಾರುಕಟ್ಟೆ, ಮೆಜೆಸ್ಟಿಕ್ ಮತ್ತಿತರ ಜನದಟ್ಟಣಿ ಪ್ರದೇಶಗಳಲ್ಲಿ ಹೆಗ್ಗುಸಿಗ್ಗಿಲ್ಲದೆ, ವೇಶ್ಯೆಯರ ಬಹಿರಂಗ ಆಹ್ವಾನ.ಕಂಡು ಕಾಣದಂತೆ ಸುತ್ತಾಡುವ ಪೊಲೀಸರು.ಸೂಕ್ಷ್ಮ ಹೃದಯಿಗಳ ಮನದಲ್ಲಿ ತಳಮಳ. ಕಳವಳ.

ವೇಶ್ಯಾವಾಟಿಕೆಗೆ ಕಡಿವಾಣ ಹಾಕುವ ಪ್ರಯತ್ನಗಳು, ವಿರಳ. ಈ ಮಧ್ಯೆ ಎಲೆಕ್ಟ್ರಾನಿಕ್ ಸಿಟಿ ಬಳಿಯ ನೈಸ್ ರಸ್ತೆ ಸೇತುವೆ ಕೆಳಗಡೆ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದರು ಎನ್ನಲಾದ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಮೈಸೂರಿನ ಹೇಮಾ(25), ರೂಪಾ(20), ಕೋಲ್ಕತ್ತಾದ ದೀಪಾ(20), ಚಿಕ್ಕಮಗಳೂರಿನ ಮಹೇಶ್(23), ಬೆಂಗಳೂರಿನ ನಿತಿನ್(23), ಶೇಖ್ ಫರೀಧ್ ಬಂಧಿತ್ ಬಂಧಿತರು.

ಬೆಂಗಳೂರು ಇನ್ನೊಂದು ಮುಂಬೈ ಆಗದಿರಲಿ.. ನೀವೇನಂತೀರಾ?

(ದಟ್ಸ್ ಕನ್ನಡ ವಾರ್ತೆ)

ಇದನ್ನೂ ಓದಿ :

ನಟಿಯಾಗಲು ಹೊರಟು ಕರೆವೆಣ್ಣಾದ ಮಾಜಿ ಮಿಸ್‌ ಬೆಂಗಳೂರು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X