ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬುಧವಾರ ಸಮಾಜ ಸೇವಕರ ಬೆನ್ನು ತಟ್ಟಲು ತಪ್ಪದೇ ಬನ್ನಿ!

By Super
|
Google Oneindia Kannada News

ಬೆಂಗಳೂರು, ಜುಲೈ 31: ಜೀವನದ ಸಾರ್ಥಕತೆಗೆ ಸಮಾಜ ಸೇವೆಯೇ ಪೂರಕ ಎಂಬ ಧ್ಯೇಯ ವಾಕ್ಯವನ್ನು ತಮ್ಮದಾಗಿಸಿಕೊಂಡಿರುವ ಸಮಾಜ ಸೇವಕರ ಸಮಿತಿಯು, ಅಗಸ್ಟ್ 1ನ್ನು ಸಮಾಜ ಸೇವಕರ ದಿನ ಎಂದು ಘೋಷಿಸಿದೆ. ಇದೇ ದಿನ ಸಮಿತಿ ತನ್ನ ವಾರ್ಷಿಕೋತ್ಸವವನ್ನು ಆಚರಿಸುತ್ತಾ ಬಂದಿದೆ.

ಪ್ರತಿ ವರ್ಷದಂತೆ ಈ ವರ್ಷವೂ ವಿವಿಧ ಕ್ಷೇತ್ರಗಳ ಗಣ್ಯರನ್ನು ಸನ್ಮಾನಿಸಲು ಸಮಿತಿ ನಿರ್ಧರಿಸಿದೆ. ಈ ಬಾರಿ ಖ್ಯಾತ ಪುರಾತತ್ವ ಶಾಸ್ತ್ರಜ್ಞ ಎಸ್.ಆರ್. ರಾವ್ ಹಾಗೂ ಪ್ರೇರಣಾ ಸಂಸ್ಥೆಯ ಪ್ರಮೋದ್ ಕುಲಕರ್ಣಿ ಅವರನ್ನು ಗೌರವಿಸಲಾಗುತ್ತದೆ.ಸುರಾನ ಕಾಲೇಜಿನ ಪ್ರಾಂಶುಪಾಲ ಕೆ.ಇ .ರಾಧಕೃಷ್ಣ, ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.

ನಗರದ ಬಿ.ಪಿ.ವಾಡಿಯಾ ರಸ್ತೆಯ ಇಂಡಿಯನ್ ಇನ್ಸ್ ನ್ಸ್ಟಿ ಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ ನಡೆಯುವ ಈ ಸಮಾರಂಭದಲ್ಲಿ, ಸಂಗೀತಗಾರ್ತಿ ಮಾನಸಿ ಪ್ರಸಾದ್ ಹಾಗೂ ತಂಡದವರು ದೇಶಭಕ್ತಿ ಗೀತೆ, ಭಾವಗೀತೆಗಳನ್ನು ಹಾಡಲಿದ್ದಾರೆ.

ಸಮಾಜ ಸೇವಕರ ಸಮಿತಿ ಬಗ್ಗೆ :

ಐದು ವರ್ಷದ ಹಿಂದೆ ಬಿ ಎಂ ಎಸ್ ಇಂಜಿನಿಯರಿಂಗ್ ಕಾಲೇಜಿನ ಉತ್ಸಾಹಿ ಯುವಕರ ಪಡೆ, ಸಮಾಜ ಸೇವೆ ಮಾಡಲು ಮುಂದಾದರು. ಸಮಿತಿ ತಲೆ ಎತ್ತಿತು. ಸಮಿತಿ ಬೆಂಬಲಕ್ಕೆ ಐಟಿ, ಮೆಡಿಕಲ್, ಕಲೆ ಹೀಗೆ ವಿವಿಧ ರಂಗಗಳ ಅನೇಕರ ಸಹಕಾರ ದೊರೆಯಿತು. ಗಿರಿನಗರದ ಅಬಲಾಶ್ರಮಕ್ಕೆ ಸಮಿತಿ ನೆರವು ನೀಡಿದೆ. ಬಳ್ಳಾರಿ ಜಿಲ್ಲೆಯ ಹಳ್ಳಿಯೊಂದರಲ್ಲಿ ಶಾಲೆ ಪ್ರಾರಂಭಿಸಿ, ಯಶಸ್ವಿಯಾಗಿ ಸಮಿತಿ ನಡೆಸಿಕೊಂಡು ಬರುತ್ತಿದೆ.

ಮಂಕುತಿಮ್ಮನ ಕಗ್ಗದ ಸತ್ವವನ್ನು ಎಲ್ಲೆಡೆ ಹರಡುವ ಉದ್ದೇಶದಿಂದ ಡಿ.ವಿ. ಗುಂಡಪ್ಪ ಅವರ ಜನ್ಮ ದಿನಾಚರಣೆಯನ್ನು ಆಚರಿಸಿ, ಅವರ ತತ್ವ ಆದರ್ಶಗಳನ್ನು ಎಲ್ಲರಿಗೂ ತಲುಪಿಸಲು ಸಮಿತಿ ಶ್ರಮಿಸುತ್ತಿದೆ. ಸಮಿತಿ ಸದಸ್ಯರು, ವಾರಾಂತ್ಯದಲ್ಲಿ ಹಳ್ಳಿಗಳಿಗೆ ತೆರಳಿ, ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದಾರೆ.

ಸಮಿತಿ ಬಗ್ಗೆ ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:

ಸಮಾಜ ಸೇವಕರ ಸಮಿತಿ
#19, 8ನೇ ಮುಖ್ಯರಸ್ತೆ,
ಬನಶಂಕರಿ 2ನೇ ಹಂತ,
ಕೈಗಾರಿಕಾ ಪ್ರದೇಶ,
ಬೆಂಗಳೂರು-70

English summary
Samaja Sevakara Dinacharane and Samaja Sevakara Samithi (R) will be celebrating its 5th anniversary on Aug.1 at Indian Institute of World Culture in Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X