• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಮ್ಮೇಳನಾಧ್ಯಕ್ಷರ ಆಯ್ಕೆ ಪ್ರಕ್ರಿಯೆ:ಚಂಪಾ ಗೋಲ್ ಮಾಲ್!

By Staff
|


ಮಂಗಳೂರಿನಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಆರಂಭದಲ್ಲಿಯೇ ವಿವಾದ ಸೃಷ್ಟಿಸಿದೆ. ಸಮ್ಮೇಳನಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಅನೇಕ ಅನುಮಾನಗಳಿಗೆ ದಾರಿ ಮಾಡಿದೆ.

ಅಧ್ಯಕ್ಷರ ಆಯ್ಕೆ ಹಿನ್ನೆಲೆ ನಡೆದ ಅಭಿಪ್ರಾಯ ಸಂಗ್ರಹಣೆಯಲ್ಲಿ ಅಕ್ರಮವಾಗಿದೆ. ಗೋಲ್ ಮಾಲ್ ನಡೆದಿದೆ ಎಂದು ಮಂಗಳೂರು ಜಿಲ್ಲಾ ಕ.ಸಾ.ಪ.ದೂರಿದೆ.ವಾಸ್ತವವಾಗಿ ಅಭಿಪ್ರಾಯ ಸಂಗ್ರಹಣೆಯಲ್ಲಿ ವ್ಯಾಸರಾಯ ಬಲ್ಲಾಳರಿಗೆ 13ಮತಗಳು, ಶೇಷಗಿರಿರಾವ್ ಅವರಿಗೆ 9ಮತಗಳು ಬಂದಿದ್ದವು. ಆದರೆ ಶೇಷಗಿರಿ ರಾವ್ ಹೆಸರನ್ನು, ಸಮ್ಮೇಳನಾಧ್ಯಕ್ಷರೆಂದು ಪ್ರಕಟಿಸಲಾಗಿದೆ ಎಂಬ ದೂರು ಕೇಳಿ ಬಂದಿದೆ.

ಅಧ್ಯಕ್ಷ ಸ್ಥಾನದಿಂದ ವಂಚಿತರಾಗಿರುವ ವ್ಯಾಸರಾಯ ಬಲ್ಲಾಳ, ಸಮ್ಮೇಳನದ ಉದ್ಘಾಟಕರಾಗಲು ನಿರಾಕರಿಸಿದ್ದಾರೆ. ಈವರೆಗೆ ಅಧ್ಯಕ್ಷರೆಂದು ಬಿಂಬಿಸಿ,ಅಂತಿಮ ಕ್ಷಣದಲ್ಲಿ ಅವಕಾಶ ತಪ್ಪಿಸಲಾಗಿದೆ ಎಂಬ ಅಸಮಾಧಾನ ಅವರಲ್ಲಿದೆ.

* * *

ಇಬ್ಬರು ಬಿಡಿಎ ಇಂಜಿನಿಯರ್‌ಗಳ ಅಮಾನತು

ಕ್ರಿಮಿನಲ್ ಆರೋಪ ಎದುರಿಸುತ್ತಿರುವ ಇಬ್ಬರು ಇಂಜಿನಿಯರುಗಳನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಎಂ.ಕೆ.ಶಂಕರಲಿಂಗೇ ಗೌಡ ಅವರು ಅಮಾನತು ಮಾಡಿದ್ದಾರೆ.

ವಿಜಯನಗರ ವಾಣಿಜ್ಯ ಸಂಕೀರ್ಣದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜಿ.ನರೇಂದ್ರಬಾಬು ಮತ್ತು ಎಲ್. ನಾಗರಾಜು ಅಮಾನತುಗೊಂಡಿರುವ ಇಂಜಿನಿಯರುಗಳು. ಈ ಇಬ್ಬರು ಇಂಜಿನಿಯರುಗಳ ಮೇಲೆ ಮೈಸೂರಿನಲ್ಲಿ ಮೊಕದ್ದಮೆ ದಾಖಲಾಗಿದೆ.

3 ಮಹಿಳೆಯರು ಸೇರಿದಂತೆ ನಾಲ್ವರ ದುರ್ಮರಣ

ಟ್ರ್ಯಾಕ್ಟರ್ ಟ್ರೇಲರ್ ಮುಗುಚಿದ್ದರಿಂದ ಮೂವರು ಮಹಿಳೆಯರು ಸೇರಿದಂತೆ ನಾಲ್ವರು ಕಾರ್ಮಿಕರು ದುರ್ಮರಣಕ್ಕೀಡಾದ ಘಟನೆ, ಗುಲಬರ್ಗಾ ಜಿಲ್ಲೆಯ ಶಹಾಬಾದ್ ಬಳಿ ಭಾನುವಾರ ರಾತ್ರಿ ನಡೆದಿದೆ.

ದಿನದ ಕೆಲಸ ಮುಗಿಸಿ ಟ್ರ್ಯಾಕ್ಟರ್‌ನಲ್ಲಿ ಮನೆಗೆ ಮರಳುತ್ತಿದ್ದಾಗ ಸಣ್ಣೂರ ಗ್ರಾಮದಲ್ಲಿ ಈ ಅವಘಡ ಸಂಭವಿಸಿದೆ. ಸತ್ತವರನ್ನು ಮಾನಿಕಮ್ಮಾ(8), ಸಂಗಮ್ಮ(42), ತುಕ್ಕಮ್ಮ(50) ಮತ್ತು ಶಿವಪ್ಪ(21) ಎಂದು ಗುರುತಿಸಲಾಗಿದೆ.

ಗಾಯಗೊಂಡ ಉಳಿದ 9 ಜನರನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

* * *

ಐಫ್ಲೆಕ್ಸ್ ಸಲ್ಯುಷನ್ ಸಂಸ್ಥೆ ತ್ರೈಮಾಸಿಕ ಶೇ. 63.71 ಲಾಭ

ಮುಂಬೈನ ತಂತ್ರಾಂಶ ಸಂಸ್ಥೆ ಐಫ್ಲೆಕ್ಸ್ ಸಲ್ಯುಷನ್ಸ್ ತನ್ನ ತ್ರೈಮಾಸಿಕ ಅವಧಿಯಲ್ಲಿ ಶೇ. 63.71ರ ಲಾಭ ಕಂಡಿದೆ.

ಜೂನ್ 30ಕ್ಕೆ ಅಂತ್ಯವಾದ ತ್ರೈ ಮಾಸಿಕ ವರದಿಯಂತೆಐ ಫ್ಲೆಕ್ಸ್ ಸಂಸ್ಥೆಯು ಸುಮಾರು 58.2ಕೋಟಿ ರೂ. ಲಾಭ ಗಳಿಸಿದೆ . ಕಳೆದ ವರ್ಷ ಇದೇ ಅವಧಿಯಲ್ಲಿ ಕಂಪೆನಿಯು 35.55 ಕೋಟಿ ರೂ. ಲಾಭವನ್ನು ಕಂಡಿತ್ತು.

ಬಿಎಸ್ ಇ ಸೆನ್ಸೆಕ್ಸ್ ಸೂಚ್ಯಂಕದಲ್ಲಿ ಈ ಬೆಳಗ್ಗೆ ಐ ಫ್ಲೆಕ್ಸ್ ನ ಶೇರುಗಳು 2205 ರೂ.ಗಳಷ್ಟಿತ್ತು ಎಂದು ವರದಿಯಾಗಿದೆ.

* * *

ಕೆ ಆರ್ ಎಸ್ ಹೋಟೆಲ್ ಈಗ ರಾಯಲ್ ಆರ್ಕಿಡ್ ಬೃಂದಾವನ್

ಕಳೆದ ದಶಕದಿಂದ ಏಳಿಗೆ ಕಾಣದೆ ಮುಚ್ಚಲ್ಪಟ್ಟಿದ್ದ ಮೈಸೂರಿನ ಪ್ರಸಿದ್ಧ ಕೆಆರ್ ಎಸ್ ಹೋಟೆಲ್ ಇಂದು ಹೊಸ್ ವಿನ್ಯಾಸ ಹಾಗೂ ಹೆಸರಿನೊಂದಿಗೆ ಸಾರ್ವಜನಿಕರಿಗೆ ಲಭ್ಯವಾಗಲಿದೆ.

ರಾಯಲ್ ಆರ್ಕಿಡ್ ಹೋಟೆಲ್ ಲಿಮಿಟೆಡ್ ಸಂಸ್ಥೆಯವರು ಕೆಆರ್ ಎಸ್ ಹೋಟೆಲ್ ಹೆಸರನ್ನು ರಾಯಲ್ ಆರ್ಕಿಡ್ ಬೃಂದಾವನ್ ಎಂದು ಬದಲಾಯಿಸಿದ್ದಾರೆ.

ಮೈಸೂರು ನಗರದಿಂದ ಸುಮಾರು 18 ಕಿ.ಮೀ ದೂರವಿರುವ ರಾಯಲ್ ಆರ್ಕಿಡ್ ಬೃಂದಾವನ್ ಹೋಟೆಲ್ ನಲ್ಲಿ ಸುಮಾರು 24 ರೂಮುಗಳಿದ್ದು,ಪಂಚತಾರಾ ಹೋಟೆಲ್ ಗಳ ಸೌಲಭ್ಯವನ್ನು ನೀಡಲಾಗುವುದು ಎಂದು ರಾಯಲ್ ಸಂಸ್ಥೆಯ ಮುಖ್ಯಸ್ಥ ಹಾಗೂ ವ್ಯವಸ್ಥಾಪಕ ನಿರ್ದೇಶಕ ಚೆಂದರ್ ಬಲ್ಜಿ ಹೇಳಿದ್ದಾರೆ.ರಾಯಲ್ ಸಂಸ್ಥೆ , ಇಡೀ ಹೋಟೆಲ್ ಜಾಗವನ್ನು ಕರ್ನಾಟಕ ಸರ್ಕಾರದಿಂದ ಬೋಗ್ಯಕ್ಕೆ ಪಡೆದಿದೆ.

* * *

ದಾವಣಗೆರೆಯಲ್ಲೂ ನಿಲ್ಲಲಿದೆ ಸಂಪರ್ಕ ಕ್ರಾಂತಿ ಎಕ್ಸ್ ಪ್ರೆಸ್

ಯಶವಂತಪುರದಿಂದ ದೆಹಲಿಗೆ ಹೋಗುವ ಸಂಪರ್ಕ ಕ್ರಾಂತಿ ಎಕ್ಸ್ ಪ್ರೆಸ್ ಅಗಸ್ಟ್ 2ರಿಂದ ದಾವಣಗೆರೆ ರೈಲು ನಿಲ್ದಾಣ್ದದಲ್ಲೂ ನಿಲ್ಲಲಿದೆ.

ರೈಲ್ವೇ ಅಧಿಕಾರಿ ಶ್ರೀಧರ್ ನಾಯಕ್ ನೀಡಿದ ಮಾಹಿತಿ ಪ್ರಕಾರ ಬೆಂಗಳೂರಿನಿಂದ ಪ್ರತಿ ಮಂಗಳವಾರ ಹಾಗೂ ಗುರುವಾರ ಹೊರಡುವ ಸಂಪರ್ಕ ಕ್ರಾಂತಿ ರೈಲು ದಾವಣಗೆರೆಯನ್ನು ಸಂಜೆ ಸುಮಾರು 6:15 ಗಂಟೆಗೆ ತಲುಪಿ, 2 ನಿಮಿಷ ನಿಲ್ಲಲಿದೆ. ಇದೇ ರೀತಿ ಶುಕ್ರವಾರ ಹಾಗೂ ಭಾನುವಾರ ದೆಹಲಿಯಿಂದ ಹೊರಡ ರೈಲು ಮಧ್ಯರಾತ್ರಿ 12.23 ಗಂಟೆಗೆ ದಾವಣಗೆರೆಯನ್ನು ತಲುಪಲಿದೆ.

ಬೆಳಗಾವಿ, ಹುಬ್ಬಳ್ಳಿ , ಗುಂತಕಲ್ ಧರ್ಮಾವರಂ, ಸಿಕಂದರಾಬಾದ್ ಹಾಗೂ ನವದೆಹಲಿಗೆ ಸಂಪರ್ಕ ಕಲ್ಪಿಸುವ ಈ ರೈಲಿನ ಮುಂಗಡ ಬುಕ್ಕಿಂಗ್ ಜುಲೈ 29 ರಿಂದ ಪ್ರಾರಂಭವಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more