• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶೇಷಗಿರಿರಾವ್‌ಗೆ ಒಲಿದ ಉಡುಪಿ ಸಮ್ಮೇಳನಾಧ್ಯಕ್ಷ ಪಟ್ಟ

By Staff
|


Prof L S Sheshagiri Rao to head Udupi Kannada Conferenceಬೆಂಗಳೂರು, ಜುಲೈ 30 :ಹಿರಿಯ ಸಾಹಿತಿ, ವಿಮರ್ಶಕ ಪ್ರೊ.ಎಲ್.ಎಸ್.ಶೇಷಗಿರಿರಾವ್, ಅಕ್ಟೋಬರ್ 25ರಿಂದ ಉಡುಪಿಯಲ್ಲಿ ನಡೆಯುವ 74ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ.ಚಂದ್ರಶೇಖರ ಪಾಟೀಲ, ‌ ಭಾನುವಾರ ನಡೆದ ಸಾಹಿತ್ಯ ಪರಿಷತ್‌ನ ಕಾರ್ಯಕಾರಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಶೇಷಗಿರಿರಾವ್ ಅವರ ಹೆಸರಲ್ಲದೆ, ಇನ್ನೊಬ್ಬ ಹಿರಿಯ ಸಾಹಿತಿ ವ್ಯಾಸರಾಯ ಬಲ್ಲಾಳರ ಹೆಸರೂ ಬಲವಾಗಿ ಪ್ರಸ್ತಾಪವಾಯಿತು. ಆದರೆ ಅಂತಿಮವಾಗಿ ಅಭಿಪ್ರಾಯ ಸಂಗ್ರಹಣೆಯಲ್ಲಿ ಶೇಷಗಿರಿರಾವ್ ಅವರಿಗೆ 13 ಮತಗಳು ಹಾಗೂ ಬಲ್ಲಾಳರಿಗೆ 9 ಮತಗಳು ಬಂದವು. ಈ ಹಿನ್ನೆಲೆಯಲ್ಲಿ ಶೇಷಗಿರಿರಾವ್ ಅವರನ್ನು ಆಯ್ಕೆ ಮಾಡಲಾಯಿತು ಎಂದು ಪಾಟೀಲ್ ವಿವರಿಸಿದರು .

ಸಭೆಯಲ್ಲಿ ಕಸಾಪ ಅಧ್ಯಕ್ಷ ಚಂಪಾ ಸೇರಿದಂತೆ 13 ಜನ ಸದಸ್ಯರು ಮತ ಚಲಾಯಿಸದೆ ತಟಸ್ಥರಾಗಿ ಉಳಿದರು ಎನ್ನಲಾಗಿದೆ.

ಬಲ್ಲಾಳ ಅಸಮಾಧಾನ : ನನಗೆ ಸಮ್ಮೇಳನಾಧ್ಯಕ್ಷ ಸ್ಥಾನ ಸಿಗುವುದೆಂಬ ನಿರೀಕ್ಷೆಯಿತ್ತು. ಅಲ್ಲದೆ ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್ ಘಟಕ ಕೂಡ ಈ ನಿಟ್ಟಿನಲ್ಲಿ ಒತ್ತಾಯ ಪಡಿಸಿತ್ತು. ಅಧ್ಯಕ್ಷ ಸ್ಥಾನ ದೊರೆಯದ ಕಾರಣ ನನಗೆ ನೋವಾಗಿದೆ. ಹಾಗಾಗಿ ಸಮ್ಮೇಳನದ ಉದ್ಘಾಟನೆ ಮಾಡಲಾರೆ ಎಂದು ವ್ಯಾಸರಾಯ ಬಲ್ಲಾಳ ಹೇಳಿದ್ದಾರೆ.

ಶೇಷಗಿರಿರಾವ್‌ಗೆ ಹರ್ಷ : ಸಮ್ಮೇಳನಾಧ್ಯಕ್ಷ ಸ್ಥಾನ ದೊರೆತಿರುವುದು ತುಂಬಾ ಸಂತಸವುಂಟುಮಾಡಿದೆ. ಬಿ.ಎಂ.ಶ್ರೀ, ರಾಜರತ್ನಂ, ಮೊದಲಾದ ಹಿರಿಯ ಸಾಹಿತಿಗಳು ಅಲಂಕರಿಸಿದ ಸ್ಥಾನದಲ್ಲಿ ಕುಳಿತುಕೊಳ್ಳುವುದು ಹೆಮ್ಮೆಯ ವಿಷಯ. ಬಲ್ಲಾಳರು ನನ್ನ ಗೆಳೆಯರು. ಅವರು ಸಮ್ಮೇಳನದ ಉದ್ಘಾಟನೆ ಮಾಡಿದರೆ ನನ್ನ ಸಂತಸ ಇಮ್ಮಡಿಯಾಗುತ್ತದೆ ಎಂದು ಶೇಷಗಿರಿರಾವ್ ಆಶಾವಾದ ವ್ಯಕ್ತಪಡಿಸಿದ್ದಾರೆ.

ಎಲ್‌ಎಸ್ಎಸ್ ಎಂದೇ ಹೆಸರಾಗಿರುವ ಲಕ್ಷ್ಮೇಶ್ವರ ಸ್ವಾಮಿರಾವ್ ಶೇಷಗಿರಿರಾವ್ , 41ವರ್ಷಗಳ ಕಾಲ ಕಾಲೇಜಿನಿಂದ ಹಿಡಿದು ವಿಶ್ವವಿದ್ಯಾಲಯದವರೆಗೆ ಇಂಗ್ಲಿಷ್ ಅಧ್ಯಾಪಕರಾಗಿ ಕೆಲಸ ಮಾಡಿದವರು. ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ ಸಾಹಿತ್ಯ ಕೃಷಿ ಮಾಡಿರುವ ಅವರು ಉತ್ತಮ ವಿಮರ್ಶಕರೆಂದು ಮನ್ನಣೆ ಗಳಿಸಿದ್ದಾರೆ.ಅಲ್ಲದೆ ಅವರು ಕನ್ನಡಪರ ಹೋರಾಟಗಳಲ್ಲಿ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡಿರುವುದನ್ನು ಇಲ್ಲಿ ಸ್ಮರಿಸಬಹುದು.

(ದಟ್ಸ್ ಕನ್ನಡ ವಾರ್ತೆ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more