• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹನೀಫ ಬಂದರು ಮಾವನ ಮನೆಗೆ ಜನಜಂಗುಳಿ ಕಾದಿತ್ತು

By Staff
|

ಬೆಂಗಳೂರು, ಜುಲೈ 30 : ಆಸ್ಟ್ರೇಲಿಯಾ ಪೊಲೀಸರ ಬಿಗಿಬಾಹುಬಂಧನದಿಂದ ಮುಕ್ತನಾಗಿ ಬೆಂಗಳೂರಿಗೆ ಹಿಂದಿರುಗಿರುವ ಡಾ. ಹನೀಫ್ ಮಾವನ ಮನೆಯಲ್ಲಿ ಈಗ ಹಬ್ಬದ ವಾತಾವರಣ.

ಹತ್ತಿರದ ನೆಂಟರು ಮಾತ್ರವಲ್ಲ ಹನೀಫ್ ಬಿಡುಗಡೆಯನ್ನು ಬಯಸಿದ್ದ ನೂರಾರು ಸಾರ್ವಜನಿಕರು ಇಂದು ಬಿಟಿಎಮ್ ಬಡಾವಣೆಯ ಮನೆಯ ಬಳಿ ನೆರೆದು ಹನೀಫ್‌ಗೆ ಶುಭಕೋರುತ್ತಿದ್ದಾರೆ.

ಆಸ್ಟ್ರೇಲಿಯಾದ ಕಳ್ಳನರಿ ಪೊಲೀಸರಿಂದ ಬಚಾವಾಗಿ ಬಂದಿರುವ ಹನೀಫ್ ಈಗ ಅಕ್ಷರಶಃ ಹೀರೋ. ಅನೇಕ ಸಂಘಟನೆಗಳು ಕೂಡ ತಮ್ಮ ಕಾರ್ಯಕ್ರಮಗಳಲ್ಲಿ ಭಾಗಿಯಾಗುವಂತೆ ಹನೀಫ್‌ರನ್ನು ಕೋರುತ್ತಿದ್ದಾರೆ. ಜನರ ಶುಭಹಾರೈಕೆ ಸಂತಸದ ಕ್ಷಣವಾದರೆ, ಅವರನ್ನು ನಿಭಾಯಿಸುವುದು ಈ ಕುಟುಂಬಕ್ಕೆ ಕಷ್ಟವಾಗುತ್ತಿದೆ.

ಕರ್ನಾಟಕ ಸರ್ಕಾರ ಹನೀಫ್‌ರಿಗೆ ಉದ್ಯೋಗ ಭರವಸೆ ನೀಡಿದ್ದು ಕುಟುಂಬಕ್ಕೆ ಸಂತಸ ತಂದಿದ್ದರೂ ಅಂತಿಮ ನಿರ್ಧಾರ ತೆಗೆದುಕೊಳ್ಳುವುದನ್ನು ಹನೀಫ್‌ಗೇ ಬಿಟ್ಟಿದೆ.

ರಾಜ್ಯ ಪೊಲೀಸರು ಕೂಡ ಹನೀಫ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರೊಡನೆ ವಿಚಾರವಿನಿಮಯ ಮಾಡಿಕೊಳ್ಳಲು ಉತ್ಸುಕತೆ ತೋರಿದ್ದಾರೆ.

ಕ್ಷಮೆಯಾಚನೆಯಿಲ್ಲ : 27 ದಿನಗಳ ಯಮಯಾತನೆಗಾಗಿ ಆಸ್ಟ್ರೇಲೀಯಾ ಪೊಲೀಸ್ ಪರವಾಗಿ ಕ್ಷಮೆಯಾಚಿಸಬೇಕೆಂಬ ಬೇಡಿಕೆಯನ್ನು ಆಸ್ಟ್ರೇಲಿಯಾದ ಪ್ರಧಾನಿ ಜಾನ್ ಹೋವರ್ಡ್ ತಳ್ಳಿಹಾಕಿದ್ದಾರೆ.

ಕ್ಷಮೆಯಾಚಿಸದಿದ್ದರೆ ಆಸ್ಟ್ರೇಲಿಯಾ ಪೊಲೀಸ್ ಮತ್ತು ವಲಸೆ ಸಚಿವಾಲಯದ ವಿರುದ್ಧ ಮೊಕದ್ದಮೆ ಹೂಡುವುದಾಗಿ ಹನೀಫ್‌ರ ವಕೀಲ ಪೀಟರ್ ರುಸ್ಸೋ ಹೇಳಿದ್ದಾರೆ.

ಆಸ್ಟ್ರೇಲಿಯಾ ನ್ಯಾಯಾಲಯದಿಂದ ಜಾಮೀನು ದೊರೆತ ಕೆಲಕ್ಷಣಗಳಲ್ಲೇ ಹನೀಫ್‌ ವೀಸಾವನ್ನು ಕಿತ್ತುಕೊಂಡ ವಲಸೆ ಸಚಿವ ಕೆವಿನ್ ಮತ್ತು ದೀರ್ಘ ವಿಚಾರಣೆ ನಡೆಸಿದರೂ ಗ್ಲಾಸ್ಗೋ ಸಂಚಿನ ಕೇಸಿನಲ್ಲಿ ಸಿಕ್ಕಿಸಲು ವಿಫಲರಾದ ಆಸ್ಟ್ರೇಲಿಯಾ ಫೆಡರಲ್ ಪೊಲೀಸರನ್ನು ಹೋವರ್ಡ್ ಬೆಂಬಲಿಸಿದ್ದಾರೆ.

(ಯುಎನ್‌ಐ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more