ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಸ್ಟ್ರೇಲಿಯಾ ವಲಸೆ ಸಚಿವರಿಗೆ ಎಬಿಸಿಡಿ ಗೊತ್ತಿಲ್ಲ : ರುಸ್ಸೊ

By Staff
|
Google Oneindia Kannada News

ಬೆಂಗಳೂರು, ಜುಲೈ 30 : ಆಸ್ಟ್ರೇಲಿಯಾದ ವಲಸೆ ಸಚಿವ ಕೆವಿನ್ ಆಂಡ್ರೂಸ್ ಅವರ ವರ್ತನೆಯನ್ನು ಡಾ.ಹನೀಫ್ ಪರ ವಕೀಲ ಪೀಟರ್ ರುಸ್ಸೊ ಟೀಕಿಸಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಅವರು, ಕೆವಿನ್ ಆಂಡ್ರೂಸ್ ಒಬ್ಬ ಬಫೂನ್ ಮಂತ್ರಿ. ದೇಶದ ವಲಸೆ ನೀತಿಯ ಬಗ್ಗೆ ಅರಿವಿಲ್ಲದ ಸಚಿವರು, ಅನಗತ್ಯವಾಗಿ ಹನೀಫ್ ವೀಸಾ ವಿಚಾರದಲ್ಲಿ ಗೊಂದಲ ಸೃಷ್ಟಿಸಿದರು. ತನಿಖೆಗೆ ಮುನ್ನವೇ ಹನೀಫ್ ಅಪರಾಧಿ ಎಂಬಂತೆ ಹೇಳಿಕೆ ನೀಡಿದರು ಎಂದು ದೂರಿದರು.

ಭಯೋತ್ಪಾದನೆ ವಿರುದ್ಧದ ಕಾನೂನು ಪರಿಷ್ಕರಣೆ ಅತ್ಯಗತ್ಯ. ಅಮಾಯಕರು ತೊಂದರೆಗೆ ಸಿಲುಕುವುದನ್ನು ತಪ್ಪಿಸಲು,ಆಸ್ಟ್ರೇಲಿಯಾ ಸರ್ಕಾರ ಗಮನಹರಿಸಬೇಕು. ಹನೀಫ್ ಪ್ರಕರಣವನ್ನು ಮುಂದಿಟ್ಟುಕೊಂಡು, ಕಾನೂನು ತಿದ್ದುಪಡಿ ಮಾಡುವ ಅಗತ್ಯವಿದೆ ಎಂದು ರುಸ್ಸೋ ಹೇಳಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X