ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಳೆದ ಮಕ್ಕಳಿಗಾಗಿ ಅಂತರ್ಜಾಲದಲ್ಲಿ ಹುಡುಕಾಡಿ...

By Staff
|
Google Oneindia Kannada News

ಬೆಂಗಳೂರು, ಜುಲೈ 29 : ಕಾಣೆಯಾದ ಮಕ್ಕಳ ಕುರಿತು ಮಾಹಿತಿ ನೀಡುವ ವೆಬ್‌ಸೈಟ್(www.missingchildsearch.net) ಬಿಡುಗಡೆಯಾಗಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಎಚ್.ಕೆ.ಕುಮಾರಸ್ವಾಮಿ, ಶನಿವಾರ ಬಾಲಭವನದಲ್ಲಿ ವೆಬ್‌ಸೈಟ್ ಬಿಡುಗಡೆಗೊಳಿಸಿದರು.

ಮಿಸ್ಸಿಂಗ್ ಚೈಲ್ಡ್ ಸರ್ಚ್(ಎಂಸಿಎಸ್) ವೆಬ್‌ಸೈಟ್ , ಬಾಸ್ಕೋ ಸ್ವಯಂ ಸೇವಾ ಸಂಸ್ಥೆಯಿಂದ ಜನ್ಮತಳೆದಿದೆ. ಸಂಸ್ಥೆ ಯುನಿಸೆಫ್‌(ವಿಶ್ವಸಂಸ್ಥೆ ಮಕ್ಕಳ ನಿಧಿ) ಹಾಗೂ ಇನ್ನಿತರ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳ ಪಾಲುದಾರಿಕೆಯಲ್ಲಿ, ಕಷ್ಟದಲ್ಲಿರುವ ಮಕ್ಕಳಿಗಾಗಿ ಕೆಲಸ ಮಾಡುತ್ತಿದೆ.

ಕಳೆದ ಮಕ್ಕಳ ಬಗ್ಗೆ ಕುಟುಂಬದವರು ದೂರು ಸಲ್ಲಿಸಿದ ಕೂಡಲೇ , ವೆಬ್‌ಸೈ‌ಟ್‌ನಲ್ಲಿ ಮಾಹಿತಿ ದಾಖಲಿಸಲಾಗುವುದು. ಕಳೆದು ಹೋಗಿರುವ ಮಕ್ಕಳ ಲೆಕ್ಕ ಇಡುವುದು ಹಾಗೂ ಪತ್ತೆ ಹಚ್ಚುವ ನಿಟ್ಟಿನಲ್ಲಿ ವೆಬ್‌ಸೈಟ್ ಮಹತ್ವದ ಪಾತ್ರ ವಹಿಸಲಿದೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X