For Daily Alerts
ಬೆಂಗಳೂರು ಭಯೋತ್ಪಾದನಾ ಕೇಂದ್ರವಲ್ಲ : ಕುಮಾರಸ್ವಾಮಿ
ಬೆಂಗಳೂರು, ಜುಲೈ 29 : ಆಸ್ಟ್ರೇಲಿಯಾ ಪೊಲೀಸ್ ಡಾ.ಮೊಹಮ್ಮದ್ ಹನೀಫ್ ವಿರುದ್ಧದ ಆರೋಪಗಳನ್ನು ಕೈಬಿಡುವುದರೊಂದಿಗೆ, ಬೆಂಗಳೂರು ಭಯೋತ್ಪಾದನಾ ಕೇಂದ್ರವಾಗುತ್ತಿಲ್ಲ ಎಂಬುದು ಸಾಬೀತಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಈ ಕುರಿತು ಶನಿವಾರ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಆಸ್ಟ್ರೇಲಿಯಾ ಪೊಲೀಸರು ಡಾ.ಮೊಹಮ್ಮದ್ ಹನೀಫ್ ವಿರುದ್ಧದ ಆರೋಪಗಳನ್ನು ಕೈ ಬಿಟ್ಟ ಸುದ್ದಿ ಕೇಳಿ, ತುಂಬಾ ನಿರಾಳಗೊಂಡಿದ್ದೇನೆ. ಇದರೊಂದಿಗೆ ನಗರಕ್ಕೂ ಭಯೋತ್ಪಾದಕ ಚಟುವಟಿಕೆಗಳಿಗೂ ಯಾವುದೇ ಸಂಬಂಧವಿಲ್ಲ ಎಂಬುದು ಸಾಬೀತಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
(ಯುಎನ್ಐ)