ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಿತ್ತೂರು ರಾಣಿ ಚೆನ್ನಮ್ಮ ಶಾಲೆ ವೆಬ್‌ಸೈಟ್‌ ಬಿಡುಗಡೆ

By Staff
|
Google Oneindia Kannada News

ಬೆಳಗಾವಿ , ಜುಲೈ 29:ಕಿತ್ತೂರು ರಾಣಿ ಚೆನ್ನಮ್ಮ ಬಾಲಕಿಯರ ವಸತಿ ಶಾಲೆಯ, ಶೈಕ್ಷಣಿಕ, ಮೂಲಸೌಕರ್ಯ ಹಾಗೂ ಪ್ರವೇಶದ ಕುರಿತು ವೆಬ್‌ಸೈಟ್( www.krcrskittur.org)ಬಿಡುಗಡೆಗೊಳಿಸಲಾಗಿದೆ.

ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ ಎ.ಜಿ.ಕೊಡ್ಗಿ ಶನಿವಾರ ವೆಬ್‌ಸೈಟ್‌ಗೆ ಚಾಲನೆ ನೀಡಿದರು. ಶಾಲೆಯ ಅಧ್ಯಕ್ಷ ಮಹೇಂದ್ರ ಎಸ್.ಕಂಠಿ ಹಾಗೂ ಪ್ರಾಂಶುಪಾಲ ಕೆ.ಎಸ್.ಜಾನ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ವೀರರಾಣಿ ಕಿತ್ತೂರು ಚೆನ್ನಮ್ಮನವರ ಸ್ಮರಣಾರ್ಥ 1969ರಲ್ಲಿ ಆರಂಭವಾಗಿರುವ ಈ ಶಾಲೆ, ಕಿತ್ತೂರಿನಿಂದ ಸುಮಾರು 3ಕಿಲೋಮೀಟರ್ ದೂರದಲ್ಲಿದೆ. 200 ಎಕರೆಗಿಂತಲೂ ವಿಶಾಲ ಪ್ರದೇಶದಲ್ಲಿ ತಲೆಯೆತ್ತಿದೆ.ಈ ಶಾಲೆಯಲ್ಲಿ ಪಾಠದ ಜೊತೆಗೆ ಸಹಪಠ್ಯ ಚಟುವಟಿಕೆಗಳಿಗೂ ಸಮಾನ ಸ್ಥಾನ ನೀಡಿರುವುದು ಗಮನಾರ್ಹ.

ಕುದುರೆ ಸವಾರಿ, ಕರಾಟೆ, ಮೊದಲಾದ ಸಾಹಸ ಕಲೆಗಳು, ಆಟೋಟಗಳು, ಸಂಗೀತ, ಸಾಹಿತ್ಯ ಮೊದಲಾದ ಲಲಿತ ಕಲೆಗಳಲ್ಲೂ ಮಕ್ಕಳಿಗೆ ಅಭಿರುಚಿ ಮೂಡಿಸುತ್ತಿರುವುದು ಶಾಲೆಯ ಹೆಗ್ಗಳಿಕೆ. ಶಾಲೆಯು ಈ ಎಲ್ಲ ಕಾರಣಗಳಿಂದ ರಾಜ್ಯದ ಮೂಲೆಮೂಲೆಗಳಿಂದ ವಿದ್ಯಾರ್ಥಿನಿಯರನ್ನು ಆಕರ್ಷಿಸುತ್ತಿದೆ.

( ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X