ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆಕ್ಸ್ ಸಿ.ಡಿ. ನಾಯಕಿ ವಂದನಾ ಸೇರಿ 7 ಮಂದಿ ಬಂಧನ

By Staff
|
Google Oneindia Kannada News

ಮಂಗಳೂರು , ಜುಲೈ 26 : ಮುಂಗಾರು ಮಳೆ ಹೆಸರಿನ ಅಶ್ಲೀಲ ಸಿ.ಡಿ.ಯಲ್ಲಿ ಕಾಣಿಸಿಕೊಂಡಿದ್ದ ವಂದನಾ, ಈಗ ಪೊಲೀಸರ ಅತಿಥಿ!

ವೇಶ್ಯಾವಾಟಿಕೆ ನಡೆಸಿದ ಹಾಗೂ ಗಾಂಜಾ ಹೊಂದಿದ ಆರೋಪದ ಮೇಲೆ ವಂದನಾ ಸೇರಿದಂತೆ 3 ಹುಡುಗಿಯರು,. ಅವರೊಂದಿಗಿದ್ದ ನಾಲ್ವರ ಯುವಕರನ್ನು ಜಿಲ್ಲಾ ಕ್ರೈಂ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ನಗರದ ಹೋಟಲೊಂದರ ಮೇಲೆ ದಾಳಿ ನಡೆಸಿದ ಅಧಿಕಾರಿಗಳು, ಜಯಶೀಲ, ಪ್ರಜ್ವಲ್, ವಂದನಾ, ಸ್ವಾತಿ ಪೈ, ಕೃತಿ, ಶೈಲೇಶ್ ಕೋಟ್ಯಾನ್ ಹಾಗೂ ವಿನಾಯಕ ಪೈ ಎಂಬುವವರನ್ನು ಬಂಧಿಸಿದರು. ವಿಕ್ರಮ್ ಹಾಗೂ ಪವಜ್ ಎಂಬುವರು ತಲೆಮರೆಸಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.

ಖಚಿತ ಸುಳಿವು ಆಧರಿಸಿ, ಮಹಿಳಾ ಪೊಲೀಸರನ್ನೂ ಒಳಗೊಂಡ ಇನ್ಸ್‌ಪೆಕ್ಟರ್ ಎ.ಡಿ.ನಾಗರಾಜ್ ನೇತೃತ್ವದ ತಂಡ ದಾಳಿ ನಡೆಸಿತು. ಈ ಸಂದರ್ಭದಲ್ಲಿ ಸುಮಾರು 5,000 ರೂಪಾಯಿ ಮೌಲ್ಯದ ಗಾಂಜಾ, ನಾಲ್ಕು ಮೊಬೈಲ್ ಫೋನ್ ಹಾಗೂ ಒಂದು ಸಿ.ಡಿ. ವಶಪಡಿಸಿಕೊಳ್ಳಲಾಯಿತು.

ಈ ಸಿಡಿ ವಂದನಾ ಎಂಬಾಕೆಯ ನೀಲಿಚಿತ್ರ ಒಳಗೊಂಡಿದೆ. ಕೆಲದಿನಗಳ ಹಿಂದೆ ಜಯಶೀಲ ಎಂಬಾತ ಇದೇ ಹೋಟಲ್‌ನಲ್ಲಿ ತನ್ನ ಮೊಬೈಲ್ ಮೂಲಕ ವಂದನಾಳ ನಗ್ನಚಿತ್ರ ಸೆರೆಹಿಡಿದಿದ್ದ. ಈ ಚಿತ್ರ ಎಂಎಂಎಸ್ ಮೂಲಕ ಎಲ್ಲೆಡೆ ಪ್ರಸಾರಗೊಂಡಿತ್ತು.

ಈ ಕುರಿತು ಟಿವಿ9 ಚಾನೆಲ್‌, ಮಂಗಳೂರಿನಲ್ಲಿ ಮುಂಗಾರು ಮಳೆ ಎಂಬ ಕಾರ್ಯಕ್ರಮ ಪ್ರಸಾರ ಮಾಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

(ಏಜನ್ಸೀಸ್)

ಇದನ್ನೂ ಓದಿ :

ಸೆಕ್ಸ್ ಸೀಡಿ ಕರ್ಮಕಾಂಡ :ಟೀವಿ 9 ಸಿಬ್ಬಂದಿ ಮೇಲೆ ಹಲ್ಲೆ

ಏಡ್ಸ್ ಸಾಮ್ರಾಜ್ಯ : ಉಡುಪಿ ಫಸ್ಟ್,ಮೈಸೂರು ಲಾಸ್ಟ್!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X