ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಡವರ ಮನೆಯಲ್ಲಿ ಹುಟ್ಟಿದ ಹೆಣ್ಣುಮಕ್ಕಳಿಗೆ ಭಾಗ್ಯಲಕ್ಷ್ಮಿ

By Staff
|
Google Oneindia Kannada News

ಬೆಂಗಳೂರು, ಜುಲೈ 25: ರಾಜ್ಯ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಭಾಗ್ಯಲಕ್ಷ್ಮಿ ಯೋಜನೆ ರೂಪಿಸಿದೆ. ದಿನಾಂಕ 1.4.2006ರ ನಂತರ ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳಲ್ಲಿ ಹುಟ್ಟಿದ 1 ಮತ್ತು 2ನೇ ಹೆಣ್ಣು ಮಕ್ಕಳಿಗೆ ರೂ. 10.000ಗಳನ್ನು 18 ವರ್ಷಗಳವರೆಗೆ ನಿಶ್ಚಿತ ಠೇವಣಿ ಇಡಲು ಯೋಜನೆ ರೂಪಿಸಲಾಗಿದೆ.

ಬಿ.ಪಿ.ಎಲ್. ಕಾರ್ಡುದಾರರು ಅಥವಾ ಇತರರು ಆದಾಯ ಪ್ರಮಾಣ ಪತ್ರವನ್ನು ಒದಗಿಸಿ ಪ್ರಯೋಜನ ಪಡೆದುಕೊಳ್ಳಬೇಕೆಂದು ಸಾರ್ವಜನಿಕರಲ್ಲಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳನ್ನು ಸಂಪರ್ಕಿಸಬಹುದು. ಈ ಪ್ರಯೋಜನಕ್ಕೆ ಅರ್ಹರಾದವರು ನಿಮಗೆ ಗೊತ್ತಿದ್ದರೆ ಅವರಿಗೆ ಈ ವಿಷಯವನ್ನು ರವಾನಿಸಬೇಕೆಂದು ದಟ್ಸ್‌ಕನ್ನಡ ಬಯಸುತ್ತದೆ.

ಹೆಚ್ಚಿನ ವಿವರ ಬೇಕಿದ್ದವರು ಬೆಂಗಳೂರು ನಗರ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೇಶಕರನ್ನು ಭೇಟಿಮಾಡಬಹುದು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X