ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಸೆಂಬರ್ ಕೊನೆಗೆ ಮಡಿಕೇರಿಯಲ್ಲಿ ವಿಶ್ವ ಕೊಡವ ಸಮ್ಮೇಳನ

By Staff
|
Google Oneindia Kannada News

ಬೆಂಗಳೂರು, ಜುಲೈ 24 : ಮಡಿಕೇರಿಯಲ್ಲಿ ಡಿಸೆಂಬರ್ 23ರಿಂದ 3ದಿನಗಳ ವಿಶ್ವ ಕೊಡವ ಸಮ್ಮೇಳನ-2007 ಆರಂಭಗೊಳ್ಳಲಿದೆ.ಕೊಡವ ಸಂಸ್ಕೃತಿ ಮತ್ತು ಸಮುದಾಯದ ಬಲವರ್ಧನೆಗಾಗಿ ಈ ಸಮ್ಮೇಳನವನ್ನು ಸಂಘಟಿಸಲಾಗಿದೆ.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಉಳ್ಳಿಯದ ದತ್ತು ಪೂವಯ್ಯ,ಸುದ್ದಿಗಾರರ ಜೊತೆ ಈ ಬಗ್ಗೆ ಮಾತನಾಡುತ್ತಿದ್ದರು. ವಿಶ್ವದ ನಾನಾ ಭಾಗಗಳಲ್ಲಿ ಸುಮಾರು 2ಲಕ್ಷ ಕೊಡವರಿದ್ದಾರೆ. ಸಮ್ಮೇಳನದ ಮುಖಾಂತರ ಕೊಡವರನ್ನು ಒಂದೆಡೆ ಸೇರಿಸುವುದು ನಮ್ಮ ಗುರಿ ಎಂದು ಅವರು ವಿವರಿಸಿದರು.

3ದಿನಗಳ ಸಮ್ಮೇಳನದಲ್ಲಿ ಕೊಡವರ ಆಹಾರ, ಉಡುಗೆತೊಡುಗೆ, ಹಬ್ಬಗಳು, ಭಾಷೆ, ಸಾಂಸ್ಕೃತಿಕ ಹಿರಿಮೆ ಗರಿಮೆಗಳು ಬಿಂಬಿತವಾಗಲಿವೆ. ವಸ್ತು ಪ್ರದರ್ಶನ, ವಿಚಾರಗೋಷ್ಠಿ, ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಸಮ್ಮೇಳನದಲ್ಲಿ ಇರಲಿವೆ. ರಾಷ್ಟ್ರದ ರಕ್ಷಣೆ, ಆಡಳಿತ, ಕ್ರೀಡೆ, ಶಿಕ್ಷಣ ಮತ್ತಿತರ ರಂಗಕ್ಕೆ ಕೊಡವರ ಕೊಡುಗೆ ದೊಡ್ಡದು ಎಂದು ಅಭಿಪ್ರಾಯಪಟ್ಟರು.

(ಯುಎನ್ಐ)

ಪೂರಕ ಓದಿಗೆ-
ವರ್ಷದ ಕೊನೆಯಲ್ಲಿ 2 ದಿನಗಳ ಕೊಡವರ ಸಮ್ಮೇಳನ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X