ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರತಿಭಾ ಪಾಟೀಲ್ ಪಕ್ಕ ನಜ್ಮಾ ಕೂರಿಸಲು ಬಿಜೆಪಿ ಪ್ರಯತ್ನ!

By Staff
|
Google Oneindia Kannada News

ನವದೆಹಲಿ, ಜುಲೈ 23: ರಾಷ್ಟ್ರಪತಿ ಸ್ಥಾನಕ್ಕೆ ಮಹಿಳೆಯೊಬ್ಬರನ್ನು ಮುಂದೆ ಇಟ್ಟುಕೊಂಡು, ಮಹಿಳೆಯರ ಪರವೆಂದು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಬಿಂಬಿಸಿಕೊಂಡಿದೆ. ಪಟ್ಟಿಗೆಪಟ್ಟು ಎನ್ನುವಂತೆ ಉಪರಾಷ್ಟ್ರಪತಿ ಸ್ಥಾನಕ್ಕೆ ಬಿಜೆಪಿ ಒಳಗೊಂಡ ಎನ್ ಡಿಎ,ಮಹಿಳಾ ಅಭ್ಯರ್ಥಿಯನ್ನೇ ಕಣಕ್ಕಳಿಸಲು ಮುಂದಾಗಿದೆ.

ರಾಜ್ಯಸಭೆಯ ಮಾಜಿ ಉಪ ಸಭಾಪತಿ ನಜ್ಮಾ ಹೆಪ್ತುಲ್ಲಾ ಅವರು, ಎನ್ ಡಿಎ ಅಭ್ಯರ್ಥಿಯಾಗಿ ಸೋಮವಾರ ನಾಮಪತ್ರ ಸಲ್ಲಿಸುವರು. ವಾಜಪೇಯಿ ನಿವಾಸದಲ್ಲಿ ನಡೆದ ಸಭೆಯಲ್ಲಿ ನಜ್ಮಾ ಆಯ್ಕೆಗೆ ಎನ್ ಡಿಎ ಅಂಗಪಕ್ಷಗಳು ಸಮ್ಮತಿಸಿವೆ.

ಸ್ವಾತಂತ್ರ್ಯ ಹೋರಾಟಗಾರ ಮೌಲಾನ ಅಬ್ಲುದ್ ಕಲಾಂ ಆಜಾದ್ ಅವರ ಮೊಮ್ಮಗಳಾದ ನಜ್ಮಾ ಹೆಪ್ತುಲ್ಲಾ, ಉಪರಾಷ್ಟ್ರಪತಿಯಾದರೆ ದೇಶದ ಎರಡು ಪ್ರತಿಷ್ಠಿತ ಹುದ್ದೆಗಳನ್ನು ಮಹಿಳೆಯರೇ ಅಲಂಕರಿಸಿದಂತಾಗುತ್ತದೆ. ಅಂದ ಹಾಗೇ ಉಪರಾಷ್ಟ್ರಪತಿ ಚುನಾವಣೆ ಆಗಸ್ಟ್ 10ರಂದು ನಡೆಯಲಿದೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X