ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾವಗಡದಲ್ಲಿ ಹೃದ್ರೋಗ ಉಚಿತ ತಪಾಸಣಾ ಶಿಬಿರ ಯಶಸ್ವಿ

By Staff
|
Google Oneindia Kannada News

Successful Heart checkup campaign held at Pavagada ಪಾವಗಡ, ಜುಲೈ 22: ಬೆಂಗಳೂರಿನನಾರಾಯಣ ಹೃದಯಾಲಯದ ಪ್ರಸಿದ್ಧ ಹೃದ್ರೋಗ ತಜ್ಞರಾದ ಡಾ.ರಾಹುಲ್ ಶೆಟ್ಟಿ ಮತ್ತು ತಂಡದವರು ಶನಿವಾರ(ಜುಲೈ 21)ದಂದು ಸ್ಥಳೀಯ ಆರೋಗ್ಯಕೇಂದ್ರದ ಸಹಕಾರದೊಂದಿಗೆ ಹಮ್ಮಿಕೊಂಡಿದ್ದ ಹೃದ್ರೋಗ ಉಚಿತ ತಪಾಸಣಾ ಶಿಬಿರವು ಸಂಪೂರ್ಣವಾಗಿ ಯಶಸ್ಸು ಕಂಡಿದೆ.

ಬೆಳಗ್ಗೆ 9 ಗಂಟೆ ಸುಮಾರಿಗೆ ಪ್ರಾರಂಭದ ಶಿಬಿರದಲ್ಲಿ ಒಟ್ಟು260 ಜನ ತಪಾಸಣೆಗೆ ಒಳಗಾದರು. ಅವರಲ್ಲಿ 150 ಮಂದಿ ಹೃದ್ರೋಗಕ್ಕೆ ಸಂಬಂಧಪಟ್ಟ ನ್ಯೂನತೆಗಳಿಗೆ ತುತ್ತಾಗಿದ್ದು ಅವರಿಗೆ ಎಲ್ಲ ರೀತಿಯ ಅತ್ಯಾಧುನಿಕ ತಪಾಸಣಾ ತಂತ್ರಜ್ಞಾನದೊಂದಿಗೆ ತಪಾಸಣೆ ನಡೆಸಲಾಯಿತು.

ಈ ಶಿಬಿರಕ್ಕೆ ಚಾಲನೆ ನೀಡಿದ ವೃತ್ತ ನಿರೀಕ್ಷಕರಾದ ಕಲ್ಲೇಶಪ್ಪನವರು ಸೇರಿದಂತೆ ಪಾವಗಡ ಹಾಗೂ ಮಧುಗಿರಿ ಭಾಗದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದರು.ಅವರಲ್ಲಿ ಸುಮಾರು 80 ಮಂದಿಗೆ ಹೃದ್ರೋಗಕ್ಕೆ ಸಂಬಂಧಪಟ್ಟ ನ್ಯೂನತೆಗಳಿಗೆ ತಪಾಸಣೆಗೆ ಒಳಗಾದರು.

ಸಂಪೂರ್ಣ ಉಚಿತ ತಪಾಸಣೆ ಮಾಡಲಾಗ ಈ ಶಿಬಿರದಲ್ಲಿ 96 ಮಂದಿಗೆ ಇ.ಸಿ.ಜಿ. ಹಾಗೂ 71 ಮಂದಿಗೆ ಇಕೊಕಾರ್ಡಿಯಾಗ್ರಾಫ್ ಅನ್ನು ಉಚಿತವಾಗಿ ಮಾಡಿ ತನ್ಮೂಲಕ ಪರಿಣಿತರಿಂದ ಹೃದ್ರೋಗ ಚಿಕಿತ್ಸೆಯನ್ನು ಹಾಗೂ ಔಷಧಿಗಳನ್ನು ವಿತರಿಸಲಾಯಿತು.

ಇದೇ ಸಂದರ್ಭದಲ್ಲಿ 3 ಮಕ್ಕಳಿಗೆ ಅತ್ಯಂತ ತುರ್ತು ಸ್ಥಿತಿಯಲ್ಲಿ ತೆರೆದ ಹೃದಯದ ಶಸ್ತ್ರಚಿಕಿತ್ಸೆಯನ್ನು ನಡೆಸಬೇಕಾಗಿದ್ದು ನಾರಾಯಣ ಹೃದಯಾಲಯದ ಸಹಯೋಗದೊಂದಿಗೆ ಸಹಾಯ ಮಾಡುವುದಾಗಿ ಸ್ವಾಮಿ ಜಪಾನಂದಜಿ ರವರು ತಿಳಿಸಿದರು.

ಈ ಹೃದ್ರೋಗ ಶಿಬಿರವು ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರ, ಶ್ರೀ ಶಾರದಾದೇವಿ ಕಣ್ಣಿನ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ ಹಾಗೂ ತುಮಕೂರಿನ ಶ್ರೀ ರಾಮಕೃಷ್ಣ ಹೃದ್ರೋಗ ಚಿಕಿತ್ಸಾ ಕೇಂದ್ರದ ನೆರವಿನೊಂದಿಗೆ ಹಮ್ಮಿಕೊಳ್ಳಲಾಗಿತ್ತು.

ಒಟ್ಟಿನಲ್ಲಿ ಈ ತೆರನಾದ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ನಡೆಸಲಾಗುವ ಆರೋಗ್ಯ ತಪಾಸಣ ಶಿಬಿರವು ಕಡು ಬಡವರಿಗೆ ಹಾಗೂ ಹಿಂದುಳಿದ ವರ್ಗದವರಿಗೆ ಹೆಚ್ಚಿನ ರೀತಿಯಲ್ಲಿ ಸಹಾಯವಾಗುತ್ತಿದೆ ಎಂಬುದರಲ್ಲಿ ಸಂದೇಹವಿಲ್ಲ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X