ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದ.ಕ.ಜಿಲ್ಲೆಗೆ ನಾಗರೀಕ ಪೊಲೀಸ್ ಪೇದೆಗಳು ಬೇಕಂತೆ!!!

By Staff
|
Google Oneindia Kannada News

ಮಂಗಳೂರು, ಜುಲೈ 22:ದ.ಕ. ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ನಾಗರೀಕ ಪೊಲೀಸ್ ಪೇದೆ ಹಾಗೂ ಮಹಿಳಾ ಪೊಲೀಸು ಪೇದೆ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿ ನಮೂನೆಗಳನ್ನು ಜಿಲ್ಲಾ ಪೊಲೀಸು ಕಛೇರಿ, ದ.ಕ. ಮಂಗಳೂರಿನಲ್ಲಿ ದಿನಾಂಕ: 23/07/07 ರಿಂದ 04/08/07ರ ತನಕ ಕಚೇರಿ ವೇಳೆಯಲ್ಲಿ ಪಡೆಯಬಹುದಾಗಿದೆ.

ಕಚೇರಿ ಸಮಯ: ಬೆಳಗ್ಗೆ 10:00 ಗಂಟೆಯಿಂದ ಸಂಜೆ05:00ಗಂಟೆ

ಅರ್ಜಿ ಶುಲ್ಕ: ರು.50

ವಯೋಮಿತಿ: ನಾಗರೀಕ ಮತ್ತು ಮಹಿಳಾ ಪೊಲೀಸು ಪೇದೆ ಹುದ್ದೆಗಳಿಗೆ ಕನಿಷ್ಟ 19 ವರ್ಷ. ಗರಿಷ್ಟ ಸಾಮಾನ್ಯ ವರ್ಗದವರಿಗೆ 23 ವರ್ಷ. ಪ.ಜಾತಿ ಮತ್ತು ಪ.ಪಂಗಡ ಮತ್ತು ಇತರ ಹಿಂದುಳಿದ ವರ್ಗದವರಿಗೆ 25 ವರ್ಷ.

ವಿದ್ಯಾರ್ಹತೆ : ಪಿ.ಯು.ಸಿ. ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.

ಖಾಲಿ ಹುದ್ದೆಗಳ ಸಂಖ್ಯೆ ಈ ಕೆಳಗಿನಂತಿದೆ:

ನಾಗರೀಕ ಪೊಲೀಸ್ ಪೇದೆ : 108
ಮಹಿಳಾ ಪೊಲೀಸ್ ಪೇದೆ :18

ಹೆಚ್ಚಿನ ಮಾಹಿತಿಗಾಗಿ ದ.ಕ. ಜಿಲ್ಲಾ ಪೊಲೀಸ್ ಕಛೇರಿಯನ್ನು ಸಂಪರ್ಕಿಸುವುದು.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X