ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಾಟಾ ಸ್ಕೈ ಹೊಂದಿದವರಿಗೆ ಇಲ್ಲೊಂದು ಶುಭ ಸಮಾಚಾರ!

By Staff
|
Google Oneindia Kannada News

ನವದೆಹಲಿ, ಜುಲೈ 19: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯವನ್ನು ಇಎಸ್‌ಪಿಎನ್ ಸಂಸ್ಥೆ ತನ್ನ ಹೊಸ ವಾಹಿನಿ ಸ್ಟಾರ್ ಕ್ರಿಕೆಟ್‌ನಲ್ಲಿ ನೀಡುತ್ತಿದೆ. ಹೀಗಾಗಿ ಕ್ರಿಕೆಟ್ ನೋಡುವ ಅವಕಾಶ ಹಲವರಿಗೆ ಇಲ್ಲವಾಗಿದೆ. ಆದರೆ ನಿರಾಸೆ ಬೇಡ.. ಒಂದು ಒಳ್ಳೆಯ ಸಮಾಚಾರ ಇಲ್ಲಿದೆ.

ಇಎಸ್‌ಪಿಎನ್ ಸಂಸ್ಥೆ ಹಾಗೂ ಟಾಟಾ ಸಂಸ್ಥೆ ಒಪ್ಪಂದ ಮಾಡಿಕೊಂಡಿದ್ದು, ಟಾಟಾ ಸ್ಕೈ ಡಿಟಿಎಚ್ ಸೇವೆಯುಳ್ಳವರು ಸ್ಟಾರ್ ಕ್ರಿಕೆಟ್ ಮೂಲಕ ಲಾರ್ಡ್ಸ್ ನಲ್ಲಿ ನಡೆಯಲಿರುವ ಪ್ರಥಮ ಟೆಸ್ಟ್ ಪಂದ್ಯದ ನೇರ ಪ್ರಸಾರವನ್ನು ವೀಕ್ಷಿಸಬಹುದು.

ಸ್ಟಾರ್ ಕ್ರಿಕೆಟ್ ಚಾನೆಲ್ ಪ್ರಾರಂಭವಾಗಿ 15 ದಿನಗಳು ಕಳೆದಿದೆ. ಕೇಬಲ್ ಆಪರೇಟರ್ ಹಾಗೂ ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ ಎಂದು ಇಎಸ್ ಪಿಎನ್ ಸಂಸ್ಥೆ ಹೇಳಿಕೊಂಡಿದೆ.

ಡಿಶ್ ಟಿವಿ, ಇನ್ ಕೇಬಲ್, ಹಾಥ್ ವೇ ಹಾಗೂ ಸಿಟಿ ಕೇಬಲ್ ಮುಂತಾದ ಪ್ರಮುಖ ಕೇಬಲ್ ಸಂಸ್ಥೆಗಳು ಸ್ಟಾರ್ ಕ್ರಿಕೆಟ್ ಪ್ರಸಾರದ ಹಕ್ಕು ಪಡೆಯಲು ಮಾತುಕತೆ ನಡೆಸಿವೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X