ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರತಿಭಾಗೆ ಕಿರೀಟ : ಇಂದು ಬರೀ ಶಿಷ್ಟಾಚಾರದ ಮತದಾನ!

By Staff
|
Google Oneindia Kannada News

ನವದೆಹಲಿ, ಜುಲೈ 19 : ರಾಷ್ಟ್ರಪತಿ ಚುನಾವಣೆಯ ಕಸರತ್ತುಗಳು ಮುಗಿದಿದ್ದು, ಮತದಾನ ಗುರುವಾರ ಬೆಳಗ್ಗೆಯಿಂದ ಆರಂಭಗೊಂಡಿದೆ.

ಸಂಸದ್ ಭವನದಲ್ಲಿ ಬಿಗಿ ಭದ್ರತೆಯ ಮಧ್ಯೆ ಬೆಳಗ್ಗೆ 10ಗಂಟೆಯಿಂದ ಮತದಾನ ಪ್ರಕ್ರಿಯೆ ಮುಂದುವರೆದಿದೆ. ಸಂಜೆ 5ಕ್ಕೆ ಮತದಾನ ಮುಕ್ತಾಯವಾಗಲಿದೆ.

ಒಟ್ಟು 11ಲಕ್ಷ ಮತಗಳ ಪೈಕಿ ಯುಪಿಎ, ಎಡಪಕ್ಷಗಳು, ಬಿಎಸ್ಪಿ, ಶಿವಸೇನೆ ಮತ್ತು ಇತರ ಪಕ್ಷಗಳ ಬೆಂಬಲ ಹೊಂದಿರುವ ಪ್ರತಿಭಾ ಪಾಟೀಲ್ 6,31,464ಮತಗಳ ಪಡೆವ ಸಾಧ್ಯತೆಗಳಿವೆ. ಬಿಜೆಪಿ, ಎನ್‌ಡಿಎದ ಕೆಲವು ಅಂಗ ಪಕ್ಷಗಳ ಬೆಂಬಲ ಪಡೆದಿರುವ ಶೇಖಾವತ್ 3,14,411ಮತಗಳ ಪಡೆಯುವ ನಿರೀಕ್ಷೆಯಿದೆ.

ಅಂಕಿಅಂಶಗಳ ಲೆಕ್ಕಾಚಾರದಂತೆ ಪ್ರತಿಭಾ ಪಾಟೀಲ್ ರಾಷ್ಟ್ರಪತಿಯಾಗುವಲ್ಲಿ ಯಾವುದೇ ಸಂಶಯವಿಲ್ಲ. ಜುಲೈ.22ರಂದು ಫಲಿತಾಂಶ ಪ್ರಕಟವಾಗಲಿದೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X