ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೇಖಾವತ್, ಪ್ರತಿಭಾ ಇಬ್ಬರಿಗೂ ಮತ ಹಾಕುವ ಹಕ್ಕಿಲ್ಲ!

By Staff
|
Google Oneindia Kannada News

ನವದೆಹಲಿ, ಜುಲೈ 19 : ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಿರುವ ಇಬ್ಬರೂ ಪ್ರಮುಖ ಹುರಿಯಾಳುಗಳಿಗೆ ಮತ ನೀಡುವ ಹಕ್ಕಿಲ್ಲ.

ರಾಜ್ಯಸಭೆಯ ಅಧ್ಯಕ್ಷರಾಗಿದ್ದರೂ ಎನ್‌ಡಿಎ ಬೆಂಬಲ ಪಡೆದಿರುವ ಸ್ವತಂತ್ರ ಅಭ್ಯರ್ಥಿ ಉಪರಾಷ್ಟ್ರಪತಿ ಭೈರೋನ್‌ಸಿಂಗ್ ಶೇಖಾವತ್ ಅವರಿಗೆ ತಮಗೆ ತಾವೇ ಮತ ನೀಡಲು ಸಾಧ್ಯವಾಗಿಲ್ಲ.

ಶೇಖಾವತ್ ಅವರು ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದರೂ ಮೇಲ್ಮನೆ ಅಥವ ಕೆಳಮನೆಗೆ ಆಯ್ಕೆಯಾಗಿಲ್ಲದ ಕಾರಣ ಮತ ಹಾಕುವುದರಿಂದ ವಂಚಿತರಾಗಿದ್ದಾರೆ.

ಮೇಲ್ನೋಟಕ್ಕೆ ತುರುಸಿನ ಸ್ಪರ್ಧೆಯಂತೆ ಕಂಡರೂ ರಾಷ್ಟ್ರಾಧ್ಯಕ್ಷರಾಗುವುದು ಖಚಿತವಾಗಿರುವ ಕಾಂಗ್ರೆಸ್ ಮತ್ತು ಎಡಪಕ್ಷಗಳ ಬೆಂಬಲದ ಪ್ರತಿಭಾ ಪಾಟೀಲ್ ಅವರ ಕಥೆಯೂ ಬೇರೆಯಲ್ಲ. ಅವರು ರಾಜಸ್ತಾನದ ಮಾಜಿ ರಾಜ್ಯಪಾಲೆಯಾಗಿದ್ದರೂ ಸಂಸದ ಅಥವಾ ರಾಜ್ಯಸಭೆ ಸದಸ್ಯರಾಗಿರದ ಕಾರಣ ಅವರೂ ಮತ ಹಾಕುವಂತಿಲ್ಲ.

ವಿಪರ್ಯಾಸವೆಂದರೆ ಇದೇ ಅಲ್ವೇ?

ಲೋಕಸಭೆ ಅಥವ ರಾಜ್ಯಸಭೆ ಚುನಾವಣೆಯಾಗಿದ್ದರೆ ತಮಗೆ ತಾವೇ ಮತ ಚಲಾಯಿಸದಿದ್ದರೆ ಅವರ ಆಯ್ಕೆಯೇ ಅಸಿಂಧುವಾಗುತ್ತಿತ್ತು. ಆದರೆ ಇಲ್ಲಿ ಹಾಗಲ್ಲ. ರಾಷ್ಟ್ರಪತಿ ಚುನಾವಣೆಗೆ ಎಂಪಿ ಅಥವ ಎಂಎಲ್‌ಎಗೆ ಮಾತ್ರ ಮತ ಚಲಾಯಿಸುವ ಹಕ್ಕಿದೆ.

ಈ ಕಾರಣದಿಂದಾಗಿ 776 ಸಂಸದರ ಪೈಕಿ 774 ಸದಸ್ಯರಿಗೆ ಮಾತ್ರ ಮತ ಚಲಾವಣೆಯ ಹಕ್ಕಿದೆ. 30 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶ ಸೇರಿ ಒಟ್ಟು ಶಾಸಕರ ಸಂಖ್ಯೆ 4120. ಈ ಜನಪ್ರತಿನಿಧಿಗಳ ಮತಗಳ ಒಟ್ಟು ಮೌಲ್ಯ 10.98 ಲಕ್ಷ.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X