• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಂಬರೀಷ್ ಈಗಲೂ ಸಂಸದ! ರಾಜೀನಾಮೆ ನಾಟಕವೇ?

By Staff
|

ಕರ್ನಾಟಕದಲ್ಲಿ ಕಾವೇರಿ ಹೋರಾಟ ಕಾವೇರಿದ್ದ ಸಂದರ್ಭದಲ್ಲಿ, ತಮ್ಮ ಸಂಸದ ಸ್ಥಾನಕ್ಕೆ ಅಂಬರೀಷ್ ರಾಜೀನಾಮೆ ನೀಡಿದ್ದರು. ಈವರೆಗೆ ಅವರ ರಾಜೀನಾಮೆ ಅಂಗೀಕಾರವಾಗಿಲ್ಲ. ಹೀಗಾಗಿ ಅಂಬರೀಷ್ ರಾಷ್ಟ್ರಪತಿ ಚುನಾವಣೆಯಲ್ಲಿ ಗುರುವಾರ ಮತದಾನ ಮಾಡಿದ್ದಾರೆ. ತಾವಿನ್ನೂ ಸಂಸದರೇ ಎಂದು ಅವರು ಘೋಷಿಸಿದ್ದಾರೆ.

***

ಶೀಘ್ರದಲ್ಲೇ ಪ್ರೌಢಶಾಲಾ ಶಿಕ್ಷಕರ ನೇಮಕಾತಿಗೆ ಅಧಿಸೂಚನೆ

ಸಾರ್ವಜನಿಕ ಶಿಕ್ಷಣ ಇಲಾಖೆ ಶೀಘ್ರದಲ್ಲೇ 3,602 ಸಹಾಯಕ ಶಿಕ್ಷಕರು ಹಾಗೂ 530ಮುಖ್ಯೋಪಾಧ್ಯಾಯರನ್ನು ನೇಮಕ ಮಾಡಿಕೊಳ್ಳಲಿದೆ. ಈ ಸಂಬಂಧ ಸದ್ಯದಲ್ಲೇ ಅಧಿಸೂಚನೆ ಹೊರಡಿಸಲಾಗುವುದು ಎಂದು ಇಲಾಖೆ ಮೂಲಗಳು ಹೇಳಿವೆ.

***

ಪೊಲೀಸ್ ಇಲಾಖೆಯಿಂದ ಅರ್ಜಿ ಆಹ್ವಾನ

4,025 ಪುರುಷ ಪೇದೆಗಳು ಹಾಗೂ 605ಮಹಿಳಾ ಪೇದೆಗಳ ನೇಮಕಾತಿಗಾಗಿಅರ್ಜಿ ಆಹ್ವಾನಿಸಲಾಗಿದೆ.

ಆಯಾ ಜಿಲ್ಲೆಗಳ ಪೊಲೀಸ್ ಸೂಪರಿಂಟೆಂಡೆಂಟ್, ಪೊಲೀಸ್ ಆಯುಕ್ತರು ಹಾಗೂ ಉಪ-ಆಯುಕ್ತರ ಕಚೇರಿಗಳಲ್ಲಿ ಅರ್ಜಿಗಳು ಲಭ್ಯ.

ಜುಲೈ 23ರಿಂದ ಆಗಸ್ಟ್ 4ರವರೆಗೆ ಅರ್ಜಿಗಳನ್ನು ವಿತರಿಸಲಾಗುವುದು. ಅರ್ಜಿ ಶುಲ್ಕ 50ರುಪಾಯಿ. ಆಗಸ್ಟ್ 8 ಅರ್ಜಿ ಸಲ್ಲಿಸಲು ಕೊನೆಯ ದಿನ.

***

ಸೆಪ್ಟಂಬರ್‌ನಲ್ಲಿ ಜಾನಪದ ಜಾತ್ರೆ

ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಸೆಪ್ಟಂಬರ್ ತಿಂಗಳಲ್ಲಿ ಜಾನಪದ ಜಾತ್ರೆ ನಡೆಯಲಿದೆ.

ಇದಕ್ಕೂ ಮೊದಲು ಮುಂಗಾರು ಆರಂಭವಾಗಿದ್ದ ಹಿನ್ನೆಲೆಯಲ್ಲಿ ಜಾನಪದ ಜಾತ್ರೆಯನ್ನು ನಿಲ್ಲಿಸಲಾಗಿತ್ತು. ಸರ್ಕಾರದ ಈ ಕ್ರಮ ವ್ಯಾಪಕ ಟೀಕೆಗೊಳಗಾಗಿತ್ತು.

***

ವಿಶ್ವ ಕನ್ನಡ ಸಮ್ಮೇಳನ

ವಿಶ್ವ ಕನ್ನಡ ಸಮ್ಮೇಳನ ಬೆಳಗಾವಿಯಲ್ಲಿ, ಸೆಪ್ಟಂಬರ್ ಕೊನೆಯ ವಾರದಲ್ಲಿ ನಡೆಯಲಿದೆ.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆಯುವ ಪೂರ್ವ ಸಿದ್ಧತಾ ಸಭೆಯಲ್ಲಿ, ಸಮ್ಮೇಳನದ ದಿನಾಂಕ ಕುರಿತು ಅಂತಿಮ ನಿರ್ಧಾರ ಹೊರಬೀಳಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಎಚ್.ಎಸ್.ಮಹದೇವಪ್ರಸಾದ್ ಹೇಳಿದ್ದಾರೆ.

***

ಪಿವಿಆರ್ ಮತ್ತು ಐನಾಕ್ಸ್ ಮಲ್ಟಿಪ್ಲೆಕ್ಸ್‌ನಲ್ಲಿ ಸಿನಿಮಾ ಬಂದ್?

ಬೆಂಗಳೂರಿನ ಪಿವಿಆರ್ ಮತ್ತು ಐನಾಕ್ಸ್‌ ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ಪ್ರದರ್ಶನ ಬಂದ್ ಆಗುವ ಸಾಧ್ಯತೆಗಳಿವೆಯೇ? ಈ ಪ್ರಶ್ನೆಗೆ ಸದ್ಯದಲ್ಲೇ ಉತ್ತರ ಹೇಳುವುದಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ತಿಳಿಸಿದೆ.

ಪಿವಿಆರ್ ಮತ್ತು ಮಲ್ಪಿಪ್ಲೆಕ್ಸ್‌ಗಳು ಪ್ರೇಕ್ಷಕರಿಂದ ದುಬಾರಿ ಪ್ರವೇಶ ಶುಲ್ಕ ವಸೂಲಿ ಮಾಡುವ ಬಗ್ಗೆ ವಾಣಿಜ್ಯ ಮಂಡಳಿ ಮತ್ತು ನಿರ್ಮಾಪಕರ ಸಂಘ ಅಸಮಾಧಾನಗೊಂಡಿವೆ. ಈ ಬಗ್ಗೆ ಚರ್ಚಿಸಲು ಸದ್ಯದಲ್ಲೇ ಸಭೆ ನಡೆಯಲಿದ್ದು, ನಂತರ ಸಿನಿಮಾ ನೀಡಬೇಕೇ? ಬೇಡವೇ ಎಂಬ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ವಾಣಿಜ್ಯ ಮಂಡಳಿ ಹೇಳಿದೆ.

***

ಶರಣರು ಬಯೋಡೇಟಾ ಬಿಟ್ಟು ಹೋಗಿದ್ದಾರಾ?

ಬಸವ ಯಾವ ಜಾತಿಗೆ ಸೇರಿದವನು ಎಂಬ ಬಗ್ಗೆ ರಾಜ್ಯದಲ್ಲಿ ಬಿಸಿಬಿಸಿ ಚರ್ಚೆ. ಬಂಜಗೆರೆ ಜಯಪ್ರಕಾಶ್‌ರ ಆನುದೇವಾ ಹೊರಗಣವನು ಕೃತಿ ಸಮರ್ಥಿಸಿದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ ಪಾಟೀಲರ ವಿರುದ್ಧ, ಅಖಿಲ ಭಾರತ ವೀರಶೈವ ಮಹಾಸಭಾ ಸಿಡಿಮಿಡಿಗೊಂಡಿದೆ.

ತಾವು ಯಾವ ಜಾತಿಗೆ ಸೇರಿದವರು ಎಂಬ ಬಗ್ಗೆ ಶರಣರು ಬಯೋಡೇಟಾ ಬಿಟ್ಟು ಹೋಗಿದ್ದಾರಾ? ಎಂಬ ಹೇಳಿಕೆ ನೀಡಿ, ಚಂಪಾ ಉದ್ಧಟತನ ಪ್ರದರ್ಶಿಸಿದ್ದಾರೆ. ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಮಹಾಸಭಾದ ಅಧ್ಯಕ್ಷ ಭೀಮಣ್ಣ ಖಂಡ್ರೆ ಒತ್ತಾಯಿಸಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more