ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈ ಬಾಂಬ್ ಸ್ಫೋಟ : ಇನ್ನೂ ಮೂವರಿಗೆ ಗಲ್ಲುಶಿಕ್ಷೆ

By Staff
|
Google Oneindia Kannada News

ಮುಂಬೈ, ಜುಲೈ 19 : 1993 ಮುಂಬೈ ಸರಣಿ ಬಾಂಬ್ ಸ್ಫೋಟದಲ್ಲಿ ಭಾಗಿಯಾದ ಇನ್ನೂ ಮೂವರಿಗೆ ಟಾಡಾ ವಿಶೇಷ ನ್ಯಾಯಾಲಯ ಗಲ್ಲು ಶಿಕ್ಷೆಯನ್ನು ವಿಧಿಸಿದೆ.

ಈ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾದವರ ಸಂಖ್ಯೆ ಆರಕ್ಕೇರಿದೆ. ಬುಧವಾರ ಪರ್ವೇಜ್ ಶೇಖ್, ಮುಷ್ತಾಕ್ ಅಹ್ಮದ್ ದುರಾನಿ ಮತ್ತು ಅಬ್ದುಲ್ ಗನಿ ತುರ್ಕ್‌ರಿಗೆ ಗಲ್ಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಲಾಗಿತ್ತು.

ಮೊಹಮ್ಮದ್ ಶೋಯಾಬ್ ಘನಸಾರ್, ಶಾಹನವಾಜ್ ಕುರೇಶಿ ಮತ್ತು ಅಸ್ಗರ್ ಮುಕದಮ್‌ರಿಗೆ ನೇಣಿಗೇರಿಸುವ ಆದೇಶವನ್ನು ನ್ಯಾಯಾಧೀಶ ಪಿ.ಡಿ.ಖೋಡೆ ಗುರುವಾರ ಹೊರಡಿಸಿದರು.

ಪ್ಲಾಜಾ ಚಿತ್ರಮಂದಿರದ ಬಳಿ ಬಾಂಬನ್ನು ಇರಿಸಿ 10 ಜನರ ಸಾವಿಗೆ ಮತ್ತು 87 ಲಕ್ಷದಷ್ಟು ಆಸ್ತಿಪಾಸ್ತಿ ಹಾನಿಗೆ ಕಾರಣನಾಗಿದ್ದಕ್ಕಾಗಿ ಅಸ್ಗರ್‌ಗೆ ಈ ಶಿಕ್ಷೆ ವಿಧಿಸಲಾಗಿದೆ. ಮೆಮನ್ ಕುಟುಂಬದ ಸದಸ್ಯರು ನೆಲೆಸಿದ್ದ ಅಲ್-ಹುಸೇನಿ ಕಟ್ಟಡಕ್ಕೂ ಆರ್‌ಡಿಎಕ್ಸನ್ನು ಸಾಗಿಸಲು ಅಸ್ಗರ್ ನೆರವಾಗಿದ್ದ.

ಶಾಹನವಾಜ್ ಕುರೇಶಿ ಕೂಡ ಅಸ್ಗರ್ ಜೊತೆಗೂಡಿ ಈ ಕೃತ್ಯಗಳನ್ನು ನಡೆಸಿದ್ದ.

(ಏಜೆನ್ಸಿ)

ಮುಂಬೈ ಸರಣಿ ಬಾಂಬ್ ಸ್ಫೋಟ : ಮೂವರಿಗೆ ಗಲ್ಲು ಶಿಕ್ಷೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X