ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದೇಶಿ ಬಂಡವಾಳದಾರರಿಗೆ ಕಡಿವಾಣ ಹಾಕಬೇಕು : ಪ್ರೇಮ್‌ಜಿ

By Staff
|
Google Oneindia Kannada News

ಬೆಂಗಳೂರು, ಜುಲೈ 19 : ವೇಗವಾಗಿ ಹಣ ಮಾಡಿಕೊಳ್ಳುವ ಉದ್ದೇಶದಿಂದ ಭಾರತಕ್ಕೆ ಬರುವ ವಿದೇಶಿ ಬಂಡವಾಳ ಹೂಡಿಕೆದಾರರಿಗೆ ಕಡಿವಾಣ ಹಾಕಬೇಕು ಎಂದು ವಿಪ್ರೋ ಅಧ್ಯಕ್ಷ ಅಜೀಂ ಪ್ರೇಮ್‌ಜಿ ಒತ್ತಾಯಿಸಿದ್ದಾರೆ.

ವಿದೇಶಿ ಬಂಡವಾಳದ ಒಳಹರಿವಿನ ಬಗ್ಗೆ ನಾವು ಯಾವಾಗಲೂ ಎಚ್ಚರದಿಂದಿರಬೇಕು. ಕೇವಲ ಶೇ.3ರಷ್ಟು ಬಡ್ಡಿಯನ್ನೂ ನೀಡಿ ಡಾಲರನ್ನು ಭಾರತಕ್ಕೆ ತರುವ ಇವರು ಶೇ.8 ಬಡ್ಡಿಗೆ ನಮಗೆ ಮಾರಿ ಬಂದ ಲಾಭವನ್ನು ತಮ್ಮ ದೇಶಕ್ಕೆ ಸಾಗಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.

ವಿಪ್ರೋದ ಮೊದಲ ತ್ರೈಮಾಸಿಕ ಫಲಿತಾಂಶವನ್ನು ಪ್ರಕಟಿಸಿದ ನಂತರ ಮಾತನಾಡುತ್ತಿದ್ದ ಅವರು, ಬೇರೆ ಕಂಪನಿಗಳನ್ನು ಖರೀದಿಸುವಾಗ ಇಂಥ ಬಂಡವಾಳದ ಬಗ್ಗೆ ನಿಗಾ ಇಡಬೇಕು ಎಂದರು.

ವಿಪ್ರೋದ ಸಿಎಫ್‌ಓ ಸುರೇಶ್ ಸೇನಾಪತಿ ಅವರು, ಭಾರತದಲ್ಲಿಯೇ ಸಾಕಷ್ಟು ಹಣವಿರುವುದರಿಂದ ವಿದೇಶಿ ಬಂಡವಾಳದಾರರಿಗೆ ಮಣೆ ಹಾಕುವ ಅಗತ್ಯವೇ ಇಲ್ಲ ಎಂದು ಉಚ್ಚರಿಸಿದರು.

ಡಾಲರ್‌ಗೆ ಪ್ರತಿಯಾಗಿ ರುಪಾಯಿ ಬೆಲೆ ಏರುತ್ತಿರುವುದು ಇದಕ್ಕೆ ಕಾರಣವೆ? ಡಾಲರನ್ನೇ ಅತಿಯಾಗಿ ನಂಬಿದ್ದ ಇನ್ಫೋಸಿಸ್ ಲಾಭಾಂಶದಲ್ಲಿ ಕೂಡ ಇಳಿತ ಕಂಡುಬಂದಿತ್ತು.

(ಯುಎನ್‌ಐ)

ಪೂರಕ ಓದಿಗೆ-
ವಿಪ್ರೋ ಲಾಭ ಶೇ.16ಕ್ಕೆ ಏರಿಕೆ:ನಿರೀಕ್ಷೆ ಇನ್ನೂ ದೊಡ್ಡದಿತ್ತು!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X