ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬಯಿ : ಬೊರಿವಿಲಿ ಕಟ್ಟಡ ಕುಸಿದು 25 ಮಂದಿ ಬಲಿ

By Staff
|
Google Oneindia Kannada News

ಮುಂಬಯಿ, ಜುಲೈ 19: ಉಪನಗರ ಬೊರಿವಿಲಿಯಲ್ಲಿನ ಕಟ್ಟಡ ಕುಸಿತ ದುರಂತದಲ್ಲಿ ಇಬ್ಬರು ಮಹಿಳೆಯರು ಹಾಗೂ ಇಬ್ಬರು ಮಕ್ಕಳು ಸೇರಿದಂತೆ 25 ಜನ ಮೃತ ಪಟ್ಟಿರುವುದು ಗುರುವಾರ ಖಾತ್ರಿಯಾಗಿದೆ.

6 ಮಹಡಿಯ ವಸತಿಕಟ್ಟಡದ ಅವಶೇಷದ ಕೆಳಗೆ ಸುಮಾರು 50 ಕ್ಕೂ ಅಧಿಕ ಜನರಿರುವ ಸಾಧ್ಯತೆಯಿದೆ ಎಂದು ರಕ್ಷಣಾ ಕಾರ್ಯದಲ್ಲಿ ನಿರತರಾಗಿರುವಅಗ್ನಿಶಾಮಕದಳದ ಸಿಬ್ಬಂದಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

40ಕ್ಕೂ ಹೆಚ್ಚು ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಬುಧವಾರ ರಾತ್ರಿ ಈ ದುರಂತ ಸಂಭವಿಸಿದೆ.

ಸುಮಾರು 25 ವರ್ಷ ಹಳೆಯದಾದ ಲಕ್ಷ್ಮಿ ಛಾಯ ಕಟ್ಟಡದ ಕೆಲ ಅಂತಸ್ತಿನ ವರ್ಧಮಾನ್ ಜ್ಯುವೆಲರಿ ಅಂಗಡಿಯಲ್ಲಿ ನಡೆಯುತ್ತಿದ್ದ ದುರಸ್ತಿ ಹಾಗೂ ನವೀಕರಣ ಕಾರ್ಯವೇ ಕಟ್ಟಡ ಕುಸಿತಕ್ಕೆ ಕಾರಣಎಂದು ಸ್ಥಳೀಯರು ಹೇಳಿದ್ದಾರೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X